ADVERTISEMENT

ಮುಂಡರಗಿ | ಕೌಟುಂಬಿಕ ಕಲಹ; ಮೂರು ಮಕ್ಕಳನ್ನು ನದಿಗೆ ಎಸೆದು ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 6:10 IST
Last Updated 6 ನವೆಂಬರ್ 2024, 6:10 IST
<div class="paragraphs"><p>ರಕ್ಷಣಾ ಕಾರ್ಯಾಚರಣೆಯ ಸಾಂದರ್ಭಿಕ ಚಿತ್ರ (ಒಳಚಿತ್ರದಲ್ಲಿ ಮಂಜುನಾಥ ಅರಕೇರಿ)</p></div>

ರಕ್ಷಣಾ ಕಾರ್ಯಾಚರಣೆಯ ಸಾಂದರ್ಭಿಕ ಚಿತ್ರ (ಒಳಚಿತ್ರದಲ್ಲಿ ಮಂಜುನಾಥ ಅರಕೇರಿ)

   

ಮುಂಡರಗಿ (ಗದಗ): ಕೌಟುಂಬಿಕ ಕಲಹದ ಕಾರಣಕ್ಕೆ ವ್ಯಕ್ತಿಯೊಬ್ಬ ಮೂರು ಮಕ್ಕಳನ್ನು ನದಿಗೆ ಎಸೆದು, ಬಳಿಕ ತಾನೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕೊರ್ಲಹಳ್ಳಿ ಸಮೀಪ ಮಂಗಳವಾರ ಸಂಜೆ ನಡೆದಿದೆ.

ತಾಲ್ಲೂಕಿನ ಮಕ್ತುಂಪುರ ಗ್ರಾಮದ ಮಂಜುನಾಥ ಅರಕೇರಿ (41), ಮಕ್ಕಳಾದ ಧನ್ಯಾ (6), ಪವನ್‌ (4) ಹಾಗೂ ಪತ್ನಿಯ ಅಣ್ಣನ ಮಗ ವೇದಾಂತ್‌ (4) ಮೃತಪಟ್ಟವರು.

ಮದ್ಯವ್ಯಸನಿಯಾಗಿದ್ದ ಮಂಜುನಾಥ ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಕೌಟುಂಬಿಕ ಕಲಹವೇ ಘಟನೆಯೇ ಕಾರಣ ಎನ್ನಲಾಗಿದೆ.

ಮುಂಡರಗಿ ಹಾಗೂ ಹೂವಿನಹಡಗಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೇಹ ಪತ್ತೆಗೆ ಶೋಧ ಕೈಗೊಂಡರು. ಮಂಗಳವಾರ ಮೃತ ದೇಹಗಳು ಪತ್ತೆಯಾಗಲಿಲ್ಲ.

ಬುಧವಾರ ಬೆಳಿಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯು ಸ್ಥಳೀಯ ಕೊರ್ಲಹಳ್ಳಿ ಗ್ರಾಮದ ಮೀನುಗಾರರ ನೆರವಿನೊಂದಿಗೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಈವರೆಗೂ ಮೃತ ದೇಹಗಳು ಪತ್ತೆಯಾಗಿಲ್ಲ.

ಸದ್ಯ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಶವಗಳು ಮುಂದೆ ಹೋಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಮೀನುಗಾರರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.