ADVERTISEMENT

‘ಸತ್ಯಾಗ್ರಹ ಲಘುವಾಗಿ ಪರಿಗಣಿಸ ಬೇಡಿ’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:21 IST
Last Updated 6 ಅಕ್ಟೋಬರ್ 2024, 14:21 IST
ನರಗುಂದದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲಿನ ಅಭಿವೃದ್ಧಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ರೈತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಸದಸ್ಯರು ವೀರಗಲ್ಲಿನ ಬಳಿ ಆರಂಭಿಸಿದ ನಿರಂತರ ಸರದಿ ಉಪವಾಸ ಸತ್ಯಾಗ್ರಹ ಭಾನುವಾರ ಐದನೇ ದಿನ ಪೂರೈಸಿತು

ನರಗುಂದ: ಕಳಸಾಬಂಡೂರಿ, ಮಹದಾಯಿ ಹೋರಾಟ ನಾಲ್ಕು ದಶಕಗಳ ಹೋರಾಟ. ಇದನ್ನು ಕೊನೆಗಾಣಿಸಲೆಂದೇ ಮತ್ತೇ ಸತ್ಯಾಗ್ರಹ ಆರಂಭಿಸಿದ್ದೇವೆ. ಇದನ್ನು ಸರ್ಕಾರ ಲಘುವಾಗಿ ಪರಿಗಣಿಸದಿರಲಿ. ಮುಂದಿನ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಕರ್ನಾಟಕ ರೈತ ಸಂಘಟನೆಗಳ ಮಹಾ ಒಕ್ಕೂಟದ ಸಂಚಾಲಕ ಶಂಕ್ರಣ್ಣ ಅಂಬಲಿ, ಬಸವರಾಜ ಸಾಬಳೆ ಹೇಳಿದರು.

ಪಟ್ಟಣದ ರೈತ ವೀರಗಲ್ಲಿನ ಬಳಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿನ ಅಭಿವೃದ್ಧಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ರೈತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಸದಸ್ಯರು ಆರಂಭಿಸಿದ ನಿರಂತರ ಸರದಿ ಉಪವಾಸ ಸತ್ಯಾಗ್ರಹ ಭಾನುವಾರ ಐದನೇ ದಿನ ಪೂರೈಸಿದ ಸಂದರ್ಭದಲ್ಲಿ ಮಾತನಾಡಿದರು

ಈಗಾಗಲೇ ರಾಜ್ಯದೆಲ್ಲೆಡೆ ಈ ಹೋರಾಟದ ಅರಿವು ಮೂಡಿದೆ.ಅದನ್ನು ಇನ್ನೂ ಹೆಚ್ಚಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ADVERTISEMENT

ಒಕ್ಕೂಟದ ಮುಖಂಡ ಬಸವರಾಜ ಸಾಬಳೆ, ನಬೀಸಾಬ ಕಿಲ್ಲೆದಾರ, ವಿಠ್ಠಲ ಜಾಧವ, ವಿ.ಎಸ್.ಸೊಪ್ಪಿನ, ಡಿ.ಎಸ್ .ಗುಡಿಸಾಗರ,ಚನ್ನು ನಂದಿ ಹಾಗೂ ಒಕ್ಕೂಟದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.