ADVERTISEMENT

ಲಕ್ಷ್ಮೇಶ್ವರ: ದಾಖಲೆ ಇಲ್ಲದ ನಗದು, ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:23 IST
Last Updated 28 ಮಾರ್ಚ್ 2024, 14:23 IST
ದಾಖಲೆ ಇಲ್ಲದೆ ಬಸ್‍ನಲ್ಲಿ ತರುತ್ತಿದ್ದ ಐದು ಲಕ್ಷ ರೂಪಾಯಿಗಳನ್ನು ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಚೆಕ್‌ಪೋಸ್ಟ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು
ದಾಖಲೆ ಇಲ್ಲದೆ ಬಸ್‍ನಲ್ಲಿ ತರುತ್ತಿದ್ದ ಐದು ಲಕ್ಷ ರೂಪಾಯಿಗಳನ್ನು ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಚೆಕ್‌ಪೋಸ್ಟ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು   

ಲಕ್ಷ್ಮೇಶ್ವರ: ಸೂಕ್ತ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಂದ ₹5 ಲಕ್ಷ ನಗದನ್ನು ತಾಲ್ಲೂಕಿನ ರಾಮಗೇರಿ ಚೆಕ್‍ಪೋಸ್ಟ್‌ನಲ್ಲಿ ಗುರುವಾರ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಧಾರವಾಡ ಜಿಲ್ಲೆ ಮುಗದ ಗ್ರಾಮದಿಂದ ಸೈಯದ್‍ಅಬ್ದುಲ್‍ರಜಾಕ್ ಎಸ್. ಪೀರ್‍ಜಾಧೆ ಎಂಬುವವರು ಬಸ್‍ನಲ್ಲಿ ಹಣ ತರುತ್ತಿರುವಾಗ ಚೆಕ್‍ಪೋಸ್ಟ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ ಹಣ ಎಂಬುದು ಗೊತ್ತಾಗಿ ಅಧಿಕಾರಿಗಳು ವಶಪಡಿಸಿಕೊಂಡರು.

ತಹಶೀಲ್ದಾರ್‌ ವಾಸುದೇವಸ್ವಾಮಿ, ಪ್ಲೈಯಿಂಗ್ ಸ್ಕಾಡ್ ಮಾರುತಿ ರಾಠೋಡ, ಪಿಎಸ್‍ಐ ಈರಪ್ಪ ರಿತ್ತಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ ಇದ್ದರು. ಚೆಕ್‍ಪೋಸ್ಟ್‌ ಬಸ್‍ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಏಳು ಲೀಟರ್ ಮದ್ಯವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 

ADVERTISEMENT
ಬಸ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶ ಪಡಿಸಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.