ನರಗುಂದ: ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿರುವ ತಾಲ್ಲೂಕಿನ ಲಕಮಾಪೂರ ಗ್ರಾಮ ಸಂಪೂರ್ಣ ಸಂಪರ್ಕ ಕಳೆದುಕೊಂಡಿದೆ. ಪ್ರವಾಹ ಇಳಿದರೂ ಗ್ರಾಮಸ್ಥರು ಈ ಗ್ರಾಮಕ್ಕೆ ಬರಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ನೂರಾರು ಜನರ ಬದುಕು ಬೀದಿಗೆ ಬಿದ್ದಿದೆ. ಗ್ರಾಮಸ್ಥರ ತೊಂದರೆ ದೂರವಾಗಬೇಕಾದರೆ ಸ್ಥಳಾಂತರವೊಂದೇ ಕೊನೆಯ ಮಾರ್ಗವಾಗಿದೆ.
‘ಈಗ ನಮಗೆ ಕೊಣ್ಣೂರು ಕೆಇಎಸ್ ಶಾಲೆಯಲ್ಲಿ ಪರಿಹಾರ ಕೇಂದ್ರ ಮಾಡಿ ಇರಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಮುಂದೆ ನಮ್ಮ ಸ್ಥಿತಿ ಹೇಗೆ ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ನಮಗೆ ಬೇಗನೇ ಇದಕ್ಕೆ ಒಂದು ಪರಿಹಾರ ರೂಪಿಸಿ ಕೊಡಬೇಕು’ ಎಂದು ಸೋಮನಗೌಡ ದೇವರಮನಿ, ಶೆಲ್ಲಿಕೇರಿ ಹಾಗೂ ಲಕಮಾಪೂರ ಗ್ರಾಮಸ್ಥರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.