ADVERTISEMENT

‘ಬಡ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿತವಾದ ಸಂಸ್ಥೆ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 14:26 IST
Last Updated 12 ಜುಲೈ 2023, 14:26 IST
ಶಿರಹಟ್ಟಿ ಪಟ್ಟಣದ ಡಿ.ಎನ್.ಡಬಾಲಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು
ಶಿರಹಟ್ಟಿ ಪಟ್ಟಣದ ಡಿ.ಎನ್.ಡಬಾಲಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು   

ಶಿರಹಟ್ಟಿ: ‘ಸಾಂಗ್ಲಿ ಸ್ಟೇಟ್ ಸರ್ಕಾರದ ಅವಧಿಯಲ್ಲಿ ಈ ಭಾಗದ ಬಡ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿತವಾದ ಹೆಮ್ಮೆಯ ಸಂಸ್ಥೆಯೇ ಡಬಾಲಿ ಸಂಸ್ಥೆ’ ಎಂದು ಸಂಸ್ಥೆಯ ಚೇರ್ಮನ್ ಡಿ.ಎನ್.ಡಬಾಲಿ ಹೇಳಿದರು.

ಸ್ಥಳೀಯ ಎಫ್.ಎಂ.ಡಬಾಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘1950ರ ಸಾಂಗ್ಲಿ ಸ್ಟೇಟ್ ಸರ್ಕಾರದ ಅವಧಿಯ ಸಂದರ್ಭದಲ್ಲಿ ಡಬಾಲಿ ಮನೆತನದವರು ಸುಮಾರು 600 ಎಕರೆ ಭೂದಾನವನ್ನು ನೀಡುವ ಮೂಲಕ ಪಟ್ಟಣದಲ್ಲಿ ಶಿಕ್ಷಣ ಸಮಿತಿ ಅಸ್ತಿತ್ವಕ್ಕೆ ಬಂದಿತು. ಈ ಭಾಗದ ಮಕ್ಕಳಿಗೆ ಶೈಕ್ಷಣಿಕ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಯಾದ ಸಂಸ್ಥೆ ಇಂದು 73 ವರ್ಷಗಳನ್ನು ಪೂರೈಸಿ 74ನೇ ವರ್ಷದ ಸೇವೆಯಲ್ಲಿದೆ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರ ಶ್ರಮ ಶ್ಲಾಘನೀಯವಾಗಿದ್ದು, ಸಂಸ್ಥೆಯಿಂದ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಆರ್.ಕುಲಕರ್ಣಿ ಮಾತನಾಡಿದರು. ಪ್ರಾಚಾರ್ಯ ಎಂ.ಸಿ.ಭಜಂತ್ರಿ, ಉಪನ್ಯಾಸಕರಾದ ಎನ್.ಹನುಮರಡ್ಡಿ, ಎಂ.ಕೆ.ಲಮಾಣಿ, ವಿ.ವಿ.ಅಮರಶೆಟ್ಟಿ, ಅಜ್ಜಣ್ಣಗೌಡ ಪಾಟೀಲ, ಎಸ್.ಎಸ್.ಪಾಟೀಲ, ಆರ್.ಎಫ್.ಬಟಕುರ್ಕಿ, ಶಿಕ್ಷಕ ಎನ್.ಎಂ.ಮಹೇಂದ್ರಕರ, ಸುಧಾ ಹುಚ್ಚಣ್ಣವರ, ಪಿ.ಎನ್.ಕುಲಕರ್ಣಿ, ಎಫ್.ಎ.ಬಾಬುಖಾನವರ, ಎನ್‌.ಆರ್.ಉಡುಚಗೊಂಡ, ಡಿ.ಐ.ಕಮಗಲ್, ಎಫ್.ಎ.ಕುಂದಿ, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.