ADVERTISEMENT

ಅವಳಿ ನಗರ: ನೀರು ಪೂರೈಕೆ ಇಂದು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 20:24 IST
Last Updated 15 ಅಕ್ಟೋಬರ್ 2024, 20:24 IST

ಗದಗ: ಅವಳಿ ನಗರದ ವಿವಿಧೆಡೆ ಬುಧವಾರ ನೀರು ಪೂರೈಕೆ ಆಗಲಿದ್ದು, ಸ್ಥಳಗಳ ವಿವರ ಇಂತಿದೆ.

ವಾರ್ಡ್ ಸಂಖ್ಯೆ 22ರ ಗಂಗಿಮಡಿ, ಅಪಾರ್ಟ್‌ಮೆಂಟ್‌, ದೊಡ್ಡ ಮಸೂತಿಯ ಉಳಿದ ಕೆಲವು ಭಾಗಗಳು. ವಾರ್ಡ್ ಸಂಖ್ಯೆ 31, 32ರ ದಾಸರ ಓಣಿ, ಭಜಂತ್ರಿ ಓಣಿ, ಚಿಕ್ಕಲಿಗಾರ ಓಣಿ, ಏಳು ಮಕ್ಕಳ ತಾಯಿ ಗುಡಿ, ಎಲ್ಲಮ್ಮನ ಗುಡಿ, ರಂಗನವಾಡ, ಕಿಲ್ಲಾ, ಜೋಡು ಮಾರುತಿ ಗುಡಿ, ಗುಜ್ಜರ ಬಸ್ತಿ, ಹಳೆ ಕಚೇರಿ, ಸುಣಗಾರ ಓಣಿ, ತ್ರಿಕೂಟೇಶ್ವರ ರಸ್ತೆಯಲ್ಲಿನ ಉಳಿದ ಕೆಲವು ಭಾಗಗಳು.

ವಾರ್ಡ್ ಸಂಖ್ಯೆ 30, 34ರ ಹುಡ್ಕೋ 1, 2, 3ನೇ ಕ್ರಾಸ್‌ಗಳು. ವಾರ್ಡ್ ಸಂಖ್ಯೆ 18, 19ರ ಹನುಮಂತ ದೇವರ ಗುಡಿ, ಅಂಬೇಡ್ಕರ್‌ ನಗರ, ಮಡಿವಾಳ ದೇವರ ಗುಡಿ, ಕುಂಬಾರ ಓಣಿ, ಬಾಗಲಕೋಟಿ ಸಂದಿ, ಡೋರಗಲ್ಲಿ ಉಳಿದ ಕೆಲವು ಭಾಗಗಳು.

ADVERTISEMENT

ವಾರ್ಡ್ ಸಂಖ್ಯೆ 21, 23ರ ಸೋಡಾ ಅಂಗಡಿ, ಈಟಿ ಅವರ ಲೈನ್‌, ನಾಗಲಿಂಗ ನಗರ, ಅಂಗನವಾಡಿ, ಶಾಂತವ್ವನ ಅಡ್ಡೆ, ಗೋದಿ ಅವರ ಲೈನ್‌, ಲಕ್ಕುಂಡಿ ಲೈನ್‌, ಮಾನ್ವಿ ಲೈನ್‌, ಅಕ್ಕಿಯವರ ಲೈನ್‌, ಬಾಳೆಕಾಯಿ ಲೈನ್‌, ಗಣಪತಿ ಗುಡಿ ಉಳಿದ ಕೆಲವು ಭಾಗಗಳು.

ವಾರ್ಡ್ ಸಂಖ್ಯೆ 29ರ ಭಾಂಡಗೆ ಲೈನ್‌, ರಾಜೀವ್‌ ಗಾಂಧಿನಗರ, ಮಸೂತಿ ಲೈನ್‌. ವಾರ್ಡ್ ಸಂಖ್ಯೆ 8, 9, 10ರಲ್ಲಿ ಬರುವ ಬೋರೇಗಾರ ಓಣಿ, ಮಜ್ಜಿಗಿ ಓಣಿ, ಶಿರಹಟ್ಟಿ ಓಣಿ, ಹೆಲ್ತ್‌ ಕ್ಯಾಂಪ್‌ಗೆ ನೀರು ಪೂರೈಕೆ ಆಗಲಿದೆ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗ ಮೇಳ

ಗದಗ: ಬೆಂಗಳೂರಿನ ರಾಜಾಜಿನಗರದ 2ನೇ ಬ್ಲಾಕ್ 28ನೇ ಕ್ರಾಸ್ ರಸ್ತೆಯ ಕೆ.ಎಲ್.ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 20ರಂದು ಉದ್ಯೋಗ ಮೇಳ ನಡೆಯಲಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಅಧೀನದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜಾನ ಸಂಸ್ಥೆಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನ್ಯಾಷನಲ್ ಕೆರಿಯರ್ ಸರ್ವಿಸ್, ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಕಾರದೊಂದಿಗೆ ಉದ್ಯೋಗಮೇಳ ಆಯೋಜಿಸಲಾಗಿದೆ.

ರಾಜ್ಯದ ಎಲ್ಲಾ ವಲಯಗಳಿಂದ 100ಕ್ಕೂ ಹೆಚ್ಚಿನ ಪ್ರತಿಷ್ಠಿತ ಬೃಹತ್, ಮಧ್ಯಮ, ಸಣ್ಣ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿದ್ದು, ಆಸಕ್ತರು ತಮ್ಮ ವಿದ್ಯಾರ್ಹತೆಯ ಎಲ್ಲ ಮೂಲ ಪ್ರಮಾಣಪತ್ರಗಳು, ಆಧಾರ್‌ ಕಾರ್ಡ್‌ ಪ್ರತಿ, ಸ್ವವಿವರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದು ಎಂದು ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.