ADVERTISEMENT

ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:55 IST
Last Updated 18 ಅಕ್ಟೋಬರ್ 2024, 15:55 IST
ನರೇಗಲ್ ಪಟ್ಟಣದ‌ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ವಿಪ್ರ ಮಹಿಳಾ ಸಂಘಟನೆಯ ಸಭೆಯಲ್ಲಿ ವಿಜಯ ನಾಡಜೋಶಿ ಮಾತನಾಡಿದರು
ನರೇಗಲ್ ಪಟ್ಟಣದ‌ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ವಿಪ್ರ ಮಹಿಳಾ ಸಂಘಟನೆಯ ಸಭೆಯಲ್ಲಿ ವಿಜಯ ನಾಡಜೋಶಿ ಮಾತನಾಡಿದರು   

ನರೇಗಲ್: ಶೀಘ್ರದಲ್ಲಿಯೆ ಗದಗ ಜಿಲ್ಲಾ ವಿಪ್ರ ಮಹಿಳಾ ಸಮಾವೇಶವನ್ನು ಗದಗನಲ್ಲಿ ಆಯೋಜಿಸಲಾಗುತ್ತದೆ. ಮಹಿಳೆಯರು ಮತ್ತು ಪುರುಷರು ಬೇಗನೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.

ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ನಡೆದ ಮಹಿಳಾ ಸಂಘಟನಾ ಸಭೆಯಲ್ಲಿ ಮಾತನಾಡಿದರು.

‘ಮಹಿಳೆಯರು ಒಟ್ಟಾದರೆ ಏನೆಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಇಂದಿನ ಸಂಘಟನಾ ಸಭೆಯಿಂದ ಹೊಸದಾದ ಗುರಿಯನ್ನು ಸಾಧಿಸಲು ಎಲ್ಲರೂ ಸಂಕಲ್ಪ ಮಾಡಬೇಕಿದೆ. ಮೊದಲು ನೀವು ಮಹಾಸಭಾದ ಸದಸ್ಯರಾದರೆ ಅದರಿಂದ ಅನೇಕ ಅನುಕೂಲತೆಗಳು ದೊರೆಯುತ್ತವೆ’ ಎಂದರು.

ADVERTISEMENT

ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ ಮಾತನಾಡಿ, ಜನವರಿ 18,19 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸುವರ್ಣ ಮಹೋತ್ಸವ ಜರುಗಲಿದೆ. ಈ ಸಮಾವೇಶದಲ್ಲಿ ನಾಡಿನ ಎಲ್ಲ ವಿಪ್ರ ಬಾಂಧವರೂ ಒಟ್ಟಿಗೆ ಸೇರುವ ಅವಕಾಶವಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಸಾಕಷ್ಟು ಆರ್ಥಿಕ ಅನುಕೂಲತೆಗಳಿವೆ. ಇವುಗಳನ್ನು ಬಳಸಿಕೊಂಡು ನೀವುಗಳು ಅನೇಕ ಕರಕುಶಲ, ಗುಡಿ ಕೈಗಾರಿಕೆ ಮತ್ತು ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕ ಸ್ವಾವಲಂಬತೆ ಹೊಂದಬಹುದು. ಮಹಿಳೆ ಆರ್ಥಿಕವಾಗಿ ಸ್ವಾವಲಂಬತೆ ಹೊಂದಿದರೆ ಆ ಕುಟುಂಬ ಚೆನ್ನಾಗಿರುತ್ತದೆ. ಅದಕ್ಕಾಗಿ ಇಂದಿನ ಈ ಸಂಘಟನೆ ತನ್ನ ಕಾರ್ಯವನ್ನು ಹಮ್ಮಿಕೊಳ್ಳಬೇಕು ಎಂದರು.

ವೇದಿಕೆಯ ಮೇಲೆ ಗದಗ ಜಿಲ್ಲಾ ಸಂಘದ ಕಾರ್ಯದರ್ಶಿ ಅನಿಲ ತೆಂಬದಮನಿ, ತಾರಾ ನಾಡಜೋಶಿ, ಶೈಲಜಾ ಕುಲಕರ್ಣಿ, ವಿಮಲಾಬಾಯಿ ಗ್ರಾಮಪುರೋಹಿತ, ಸನ್ಮತಿ ಸದರಜೋಶಿ, ಪದ್ಮಾ ಕುಲಕರ್ಣಿ, ಜ್ಯೋತಿ ನಾಡಿಗೇರ, ಲಕ್ಷ್ಮೀ ಗ್ರಾಮಪುರೋಹಿತ, ವಿದ್ಯಾ ಗ್ರಾಮಪುರೋಹಿತ, ಸುಶೀಲಾ ಪುರಾಣಿಕ, ಅನಿತಾ ಗ್ರಾಮಪುರೋಹಿತ, ಪ್ರಭಾ ರಾಯಭಟ್ಟನವರ, ಜಯಶ್ರೀ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಪೂಜಾ ಗ್ರಾಮಪುರೋಹಿತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.