ADVERTISEMENT

ಅನುಷ್ಠಾನದಿಂದ ಆತ್ಮ ಬಲ ವೃದ್ಧಿ: ತೋಂಟದ ಶ್ರೀ

ಶಾಂತಲಿಂಗ ಶ್ರೀಗಳ ಒಂದು ತಿಂಗಳ ಮೌನ ಅನುಷ್ಠಾನ ಮಂಗಲೋತ್ಸವ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 12:56 IST
Last Updated 6 ಆಗಸ್ಟ್ 2024, 12:56 IST
ನರಗುಂದ ತಾಲ್ಲೂಕಿನ ಶಿರೋಳ ತೋಂಟದಾರ್ಯ ಮಠದಲ್ಲಿ ಸೋಮವಾರ ಪೀಠಾಧಿಪತಿ ಶಾಂತಲಿಂಗ ಶ್ರೀಗಳ ಒಂದು ತಿಂಗಳ ಮೌನಲಿಂಗಾನುಷ್ಟಾನ ಮಂಗಲೋತ್ಸವದಲ್ಲಿ ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು
ನರಗುಂದ ತಾಲ್ಲೂಕಿನ ಶಿರೋಳ ತೋಂಟದಾರ್ಯ ಮಠದಲ್ಲಿ ಸೋಮವಾರ ಪೀಠಾಧಿಪತಿ ಶಾಂತಲಿಂಗ ಶ್ರೀಗಳ ಒಂದು ತಿಂಗಳ ಮೌನಲಿಂಗಾನುಷ್ಟಾನ ಮಂಗಲೋತ್ಸವದಲ್ಲಿ ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು   

ನರಗುಂದ: ಸ್ವಾಮಿಗಳಾದವರಿಗೆ ಆತ್ಮ ಬಲವಿರಬೇಕು. ಅದರಿಂದ ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯ. ಒಂದು ತಿಂಗಳ ಮೌನಾನುಷ್ಠಾನದಿಂದ ಮನಸ್ಸು ಏಕಾಗ್ರತೆ ಹೊಂದುತ್ತದೆ. ಆತ್ಮ ಬಲ ವೃದ್ಧಿಯಾಗುತ್ತದೆ ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಶ್ರೀ ಹೇಳಿದರು.

ತಾಲ್ಲೂಕಿನ ಶಿರೋಳ ತೋಂಟದಾರ್ಯ ಮಠದಲ್ಲಿ ಸೋಮವಾರ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಹಾಗೂ ಶಿರೋಳ ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳ ಒಂದು ತಿಂಗಳ ಮೌನಲಿಂಗಾನುಷ್ಟಾನ ಮಂಗಲೋತ್ಸವದಲ್ಲಿ ಮಾತನಾಡಿದರು.

ವರ್ಷದ ಉಳಿದ ಹನ್ನೊಂದು ತಿಂಗಳ ಸಮಾಜ ಕಲ್ಯಾಣ ಸೇವೆ ಮಾಡುವ ಇಚ್ಚೆ ಬೆಳೆಯುತ್ತದೆ. ಸ್ವಾಮಿಗಳೆಂದರೆ ಸಮಾಜದ ಸೇವಕರು ಹೊರತು, ಮಠದ ಮಾಲೀಕರಲ್ಲ. ಸ್ವಾಮಿಗಳಿಗೆ ಜೀವ ಕೊಟ್ಟವರು ಸಮಾಜದ ಸರ್ವ ವರ್ಗದ ಜನರು, ಆದ್ದರಿಂದ ಸ್ವಾಮಿಗಳಾದವರಿಗೆ ಸಮಾಜದ ಅಭಿವೃದ್ಧಿಯೇ ಮುಖ್ಯ ಎಂದರು.

ADVERTISEMENT

ಸ್ವಾಮಿಗಳು ಮತ್ತು ಸಮಾಜದ ಸಂಬಂಧ ನೀರು ಮತ್ತು ಮೀನಿನ ಸಂಬಂಧ. ಸ್ವಾಮಿಗಳು ಸಮಾಜದ ಓರೆಕೋರೆಗಳನ್ನು ತಿದ್ದಿ, ವ್ಯಸನ ಮುಕ್ತ ಪರಿಶುದ್ಧ ಸಮಾಜ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಶಾಂತಲಿಂಗ ಶ್ರೀಗಳ ಕನ್ನಡ ಕಾರ್ಯ ಶ್ಲಾಘನೀಯ. ಅವರ ಬಗ್ಗೆ ಸಮಾಜದಲ್ಲಿ ಒಳ್ಳೆಯ ವಿಶ್ವಾಸ ಇದೆ. ಅದಕ್ಕೆ ಮಂಗಲೋತ್ಸವ ಕಾಯಕ್ರಮಕ್ಕೆ ಹರಿದು ಬಂದ ಜನಸಾಗರವೇ ಸಾಕ್ಷಿ ಎಂದು ಸಿದ್ದರಾಮ ಶ್ರೀ ಹೇಳಿದರು.

ನಿವೃತ್ತ ಉಪನ್ಯಾಸಕ.ಎಸ್ ಎಸ್ ಹರ್ಲಾಪೂರ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಶ್ರೀ, ನವಲಗುಂದ ಗವಿಮಠದ ಬಸವಲಿಂಗ ಶ್ರೀ, ಮಡಿವಾಳೇಶ್ವರ ಮಠದ ವೀರೇಶ್ವರ ಶ್ರೀ, ಅಪ್ಪಯ್ಯನವರು, ಗವಿಮಠದ ಅಭಿನವ ಯಚ್ಚರೇಶ್ವರ ಶ್ರೀ, ಶಿವಯೋಗಾಶ್ರಮದ ಮಾತೆ ಅಕ್ಕಮಾಹಾದೇವಿ ಶರಣಮ್ಮನವರು, ಕಿತ್ತಲಿ ಸಿದ್ಧರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ, ಎಸ್.ಎಸ್.ಪಟ್ಟಣಶೆಟ್ಟರ, ಮೃತ್ಯುಂಜಯ ಹಿರೇಮಠ, ಉಮೇಶಗೌಡ ಪಾಟೀಲ, ವಿವೇಕ ಯಾವಗಲ್, ಚನ್ನಬಸಪ್ಪ ಕಂಠಿ, ಶಂಕ್ರಣ್ಣ ವಾಳದ, ಸಿ.ಎಚ್.ಕೋರಿ, ವಿ.ಎನ್.ಕೊಳ್ಳಿಯವರ, ಬಿ.ಬಿ.ಐನಾಪುರ, ಪ್ರಕಾಶಗೌಡ ತಿರಕನಗೌಡ್ರ, ಹನಮಂತ ಕಾಡಪ್ಪನವರ, ನಾಗನಗೌಡ ತಿಮ್ಮನಗೌಡ್ರ, ಗುರುಬಸಯ್ಯ ಶಲ್ಲಿಕೇರಿ, ಬಿ.ಎಸ್.ಸಾಲಿಮಠ, ಆರ್.ಬಿ.ಚಿನಿವಾಲರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.