ADVERTISEMENT

ನೀರಿನ ಸಮಸ್ಯೆ: ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ರಜೆ ಕೊಟ್ಟ ಜಿಮ್ಸ್‌

​ಪ್ರಜಾವಾಣಿ ವಾರ್ತೆ
Published 15 ಮೇ 2024, 19:24 IST
Last Updated 15 ಮೇ 2024, 19:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗದಗ: ನೀರಿನ ಸಮಸ್ಯೆ ಎದುರಾದ ಕಾರಣ ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ಹಾಸ್ಟೆಲ್‌ನಲ್ಲಿ ವಾಸವಿರುವ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ರಜೆ ಕೊಟ್ಟು ಮನೆಗೆ ಕಳುಹಿಸಲಾಗಿದೆ.

‘ನೀರಿನ ಸಮಸ್ಯೆ  ಕಾರಣಕ್ಕೆ ರಜೆ ಕೊಡಲಾಗಿದೆ. ಪ್ರಾಧ್ಯಾಪಕರ ವಸತಿಗೃಹಗಳಿಗೂ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ನೀರಿನ ಸಮಸ್ಯೆ ಬಗೆಹರಿಸಬೇಕು’ ಎಂದು ಜಿಮ್ಸ್‌ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ರಜೆಗೆ ನೀರಿನ ಸಮಸ್ಯೆ ಕಾರಣವಲ್ಲ: ‘ನೀರಿನ ಸಮಸ್ಯೆ ಉಂಟಾಗಿದ್ದಕ್ಕೆ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ರಜೆ ಕೊಟ್ಟಿಲ್ಲ. ಎರಡು ಬ್ಯಾಚ್‌ನ ವಿದ್ಯಾರ್ಥಿಗಳ ಆಂತರಿಕ ಪರೀಕ್ಷೆಗಳು ಮುಗಿದಿದ್ದಕ್ಕೆ ಅವರಿಗೆ ಐದು ದಿನ ರಜೆ ನೀಡಲಾಗಿದೆ. ಸೋಮವಾರದಿಂದ ತರಗತಿಗೆ ಹಾಜರಾಗುವರು’ ಎಂದು ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಿಲ್ಲಾ ಆಸ್ಪತ್ರೆಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಇಲ್ಲಿಗೆ 24/7 ನೀರು ಪೂರೈಕೆ ಇಲ್ಲ. ಕೊಳವೆಬಾವಿ ನೀರನ್ನು ಒದಗಿಸಲಾಗಿದ್ದು, ರೋಗಿಗಳಿಗೆ ತೊಂದರೆ ಆಗಿಲ್ಲ. ಹಮ್ಮಿಗಿ ಬ್ಯಾರೇಜ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆದಿರುವುದಕ್ಕೆ  ಹಾಸ್ಟೆಲ್‌ಗೆ ನೀರು ಪೂರೈಕೆ ಆಗಿಲ್ಲ. ನೀರನ್ನು ಮಿತವಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.