ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹನುಮ ಜಯಂತಿಯನ್ನು ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.
ಐತಿಹಾಸಿಕ ಸೋಮಾಪುರ ಓಣಿಯಲ್ಲಿ ಮಾರುತಿ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹನುಮ ಜಯಂತಿ ಆಚರಿಸಲಾಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಬಸ್ ಡಿಪೋ ಹತ್ತಿರದ ಹನುಮಾನ ಮಂದಿರದಲ್ಲಿ ಮಹಿಳೆಯರು ಬಾಲ ಹನುಮನ ತೊಟ್ಟಿಲೋತ್ಸವ ನೆರವೇರಿಸಿದರು. ಆರೋಗ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಸಾರಿಗೆ ಸಂಸ್ಥೆ ಸಿಬ್ಬಂದಿ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಚನಬಸಯ್ಯ ಶಿಂದೋಗಿಮಠ, ಶಾರದಾ ದೊಡಮನಿ, ಅನಸವ್ವ ಶಿಂದೋಗಿಮಠ, ಗಂಗಮ್ಮ ಬಾಟಿ, ಸುಶೀಲಾ ಹಿರೇಗೌಡ್ರ, ಭಾವನಾ ಮೋಟೆ, ಅಶ್ವಿನಿ ಮಂತ್ರಿ, ಜಿಜಾಬಾಯಿ ಬಾಬರ, ಭಾರತಿ ಶಿರಸಂಗಿ, ಈರಮ್ಮ ನರೆಗಲ್ಲ, ರಾಜೇಶ್ವರಿ ಹಿರೇಮಠ, ಕಮಲಾ ಪೇಠೆ, ನೀಲಮ್ಮಾ ಗಾಣಿಗೇರ, ಪ್ರೇಮಾ ಹೂಗಾರ, ಮಂಜು ಪವಾರ, ಮಹಾದೇವಿ ಸಂಗಳಮಠ, ಬಸಮ್ಮ, ಯಶೋಧಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.