ಗಜೇಂದ್ರಗಡ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಹಾಗೂ ರೋಣ ಮತಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಶಾಸಕ ಕಳಕಪ್ಪ ಬಂಡಿ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ’ ಎಂದು ಸಂಸದ ಶಿವಕುಮಾರ ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ಸಮೀಪದ ಇಟಗಿ ಗ್ರಾಮದಲ್ಲಿ ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಕಳಕಪ್ಪ ಬಂಡಿ ಪರ ಶುಕ್ರವಾರ ಅವರು ಮತಯಾಚಿಸಿದರು.
ಕಳಕಪ್ಪ ಬಂಡಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ನಂ.1 ನಾಯಕರಾಗಿ ಹೊರ ಹೊಮ್ಮಿದ್ದಾರೆ. ಶತ್ರು ದೇಶಗಳೂ ಸಹ ಮೋದಿ ಅವರಂತಹ ನಾಯಕ ನಮ್ಮ ದೇಶಕ್ಕೆ ಬೇಕಿದೆ ಎನ್ನುತ್ತಿವೆ. ಆದರೆ ಕಾಂಗ್ರೆಸ್ನವರು ನರೇಂದ್ರ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ’ ಎಂದು ಟೀಕಿಸಿದರು.
ನಂತರ ಸೂಡಿ, ನಿಡಗುಂದ, ಜಕ್ಕಲಿ ಗ್ರಾಮಗಳಲ್ಲಿ ಪ್ರಚಾರ ಸಭೆಗಳು ಹಾಗೂ ರೋಡ್ ಶೋ ನಡೆಯಿತು. ಬಿಜೆಪಿ ರಾಜ್ಯ ಒಬಿಸಿ ಕಾರ್ಯದರ್ಶಿ ರವಿ ದಂಡಿನ, ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ, ಪ್ರಧಾನ ಕಾರ್ಯದರ್ಶಿ ಉಮೇಶ ಮಲ್ಲಾಪುರ, ಕಳಕಪ್ಪ ಮಳಗಿ, ಸಂಗನಗೌಡ ಮಾಲಿಪಾಟೀಲ, ದೇವರಾಜ ದೇಸಾಯಿ, ಈರಪ್ಪ ಯರಗೇರಿ, ಬಸವರಾಜ ಕೋಮರ, ಶರಣಯ್ಯ ಹಿರೇಮಠ, ಬಸಯ್ಯ ಹಿರೇಮಠ, ಮಲ್ಲು ಕುರಿ, ರಾಜು ಹಿರೇಮಠ, ನಾಗರಾಜ ಪಲ್ಲೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.