ಗದಗ: ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರಿಗೆ ಬೆಂಬಲ ಸೂಚಿಸಿ ಎಸ್.ಎಸ್.ಕೆ ಸಮಾಜದ ಮುಖಂಡರು, ಮಹಿಳೆಯರು ಶನಿವಾರ ಪಾದಯಾತ್ರೆ ನಡೆಸಿದರು.
ಗದಗ-ಬೆಟಗೇರಿ ಅವಳಿ ನಗರದ ಅಂಬಾಭವಾನಿ ದೇವಸ್ಥಾನದ ಎದುರಿಗಿರುವ ಹಳೇ ಸರಾಫ ಬಜಾರಿನಿಂದ ಆರಂಭಗೊಂಡ ಪಾದಯಾತ್ರೆ ನಾರಾಯಣರಾವ್ ವೃತ್ತ (ಟಾಂಗಾಕೂಟ), ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣ, ರೋಟರಿ ಸರ್ಕಲ್ ಮಾರ್ಗವಾಗಿ ಪಾಲಾ-ಬಾದಾಮಿ ರಸ್ತೆಯಲ್ಲಿರುವ ಸಂಸದರ ಜನಸಂಕರ್ಪ ಕಾರ್ಯಾಲಯ ತಲುಪಿ ಮುಕ್ತಾಯಗೊಂಡಿತು.
ಆರನೂರಕ್ಕೂ ಹೆಚ್ಚು ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು. ಪ್ರಧಾನಿ ನರೇಂದ್ರ ಮೋದಿ, ಅನಿಲ್ ಮೆಣಸಿನಕಾಯಿ ಅವರ ಭಾವಚಿತ್ರ ಪ್ರದರ್ಶಿಸಿ ಬಿಜೆಪಿಗೆ ಬೆಂಬಲ ಸೂಚಿಸಿದರು. ಮೆಣಸಿನಕಾಯಿ ಅವರ ಪತ್ನಿ ವಾಣಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕ್ಷತ್ರಿಯ ಸಮಾಜದ ಮುಖಂಡ ಶ್ರೀಕಾಂತ್ ಖಟವಟೆ, ಮುಂಬೈನ ಕ್ಷತ್ರಿಯ ಸಮಾಜದ ಹರೀಶ್ ಲಾಡ್, ಗದಗ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಉಸ್ತುವಾರಿ ರಜನೀಶ್ ತ್ಯಾಗಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಸದಸ್ಯರಾದ ಶೈಲಾ ಬಾಕಳೆ, ಹುಲಿಗೆಮ್ಮ ಹಬೀಬ, ಮಾಧುಸಾ ಮೇರವಾಡೆ, ರೇಖಾ ಖಟವಟೆ, ಬಿ.ಎಚ್.ಲದ್ವಾ, ಜಗನ್ನಾಥಸಾ ಬಾಂಡಗೆ, ರವಿ ಸಿದ್ಲಿಂಗ್, ತೋಟಸಾ ಬಾಂಡಗೆ, ಸುಧೀರ್ ಕಾಟೇಗಾರ, ವಿನಾಯಕ ಹಬೀಬ, ಶ್ರೀನಿವಾಸ ಬಾಂಡಗೆ, ಪ್ರಕಾಶ್ ಬಾಕಳೆ, ವಿಠ್ಠಲ ಬಾಂಡಗೆ, ಕಿಶನ್ ಮೇರವಾಡೆ, ಬಾಬು ಬಾಕಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.