ADVERTISEMENT

ಕೆ.ಎಚ್‌.ಪಾಟೀಲ ಜನ್ಮ ಶತಮಾನೋತ್ಸವ: ಡಾ. ಸಿ.ಎನ್‌.ಮಂಜುನಾಥಗೆ ಪ್ರಶಸ್ತಿ ಪ್ರದಾನ

ಕೆ.ಎಚ್‌.ಪಾಟೀಲ ಜನ್ಮ ಶತಮಾನೋತ್ಸವ ಪ್ರಾರಂಭೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:43 IST
Last Updated 15 ಮಾರ್ಚ್ 2024, 15:43 IST
ಕೆ.ಎಚ್‌.ಪಾಟೀಲ
ಕೆ.ಎಚ್‌.ಪಾಟೀಲ   

ಗದಗ: ಕೆ.ಎಚ್‌.ಪಾಟೀಲ ಜನ್ಮಶತಮಾನೋತ್ಸವ ಪ್ರಾರಂಭೋತ್ಸವ ಕಾರ್ಯಕ್ರಮ ಶನಿವಾರ ಸಂಜೆ 4ಕ್ಕೆ ಹುಲಕೋಟಿಯ ಕೆ.ಎಚ್‌.ಪಾಟೀಲ ವಿದ್ಯಾಮಂದಿರ ಪ್ರಾಂಗಣದಲ್ಲಿ ನಡೆಯಲಿದೆ.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕಾರ್ಯಕ್ರಮ ಉದ್ಘಾಟನೆ ಹಾಗೂ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡುವರು.

ಜಯದೇವ ಹೃದ್ರೋಗ ಸಂಸ್ಥೆ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಅವರ ಶ್ರೇಷ್ಠ ಮಾನವೀಯ ಸೇವೆಗಾಗಿ ‘ಕೆ.ಎಚ್‌.ಪಾಟೀಲ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪ್ರಶಸ್ತಿ ಪ್ರದಾನ ಮಾಡುವರು.

ADVERTISEMENT

ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕೆ.ಎಚ್‌.ಪಾಟೀಲ ಕಿಡ್ನಿ ಕೇರ್‌ ಉದ್ಘಾಟನೆ, ದಿ.ಗದಗ ಕೋ– ಅಪರೇಟಿವ್‌ ಕಾಟನ್‌ ಸೇಲ್‌ ಸೊಸೈಟಿ ಆಡಳಿತ ಮಂಡಳಿಯ ಕಟ್ಟಡ ಸಂಕೀರ್ಣದ ಭೂಮಿಪೂಜೆ, ಹುಲಕೋಟಿಯ ಮಾರುತಿ ದೇವಸ್ಥಾನದ ಸಮುದಾಯ ಭವನದ ಭೂಮಿಪೂಜೆ, ಹುಲಕೋಟಿಯಲ್ಲಿ ನೂತನ ಬಸ್‌ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌, ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಶಾಸಕರಾದ ಜಿ.ಎಸ್‌.ಪಾಟೀಲ, ಸಿ.ಸಿ.ಪಾಟೀಲ, ಡಾ. ಚಂದ್ರು ಲಮಾಣಿ, ಸಂಸದ ಜಿ.ಎಸ್‌.ಬಸವರಾಜ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದರಾದ ಐ.ಜಿ.ಸನದಿ, ಆರ್‌.ಎಸ್‌.ಪಾಟೀಲ, ಮಾಜಿ ಸಚಿವ ಬಿ.ಆರ್‌.ಯಾವಗಲ್‌, ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಡಾ.ಸಿ.ಎನ್.ಮಂಜುನಾಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.