ADVERTISEMENT

ಕೊಟ್ಟೂರ ಬಸವೇಶ್ವರ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 10 ಮೇ 2024, 15:33 IST
Last Updated 10 ಮೇ 2024, 15:33 IST
ಯಲಿಶಿರುಂದ ಗ್ರಾಮದ ಕೊಟ್ಟೂರ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು ವರರು
ಯಲಿಶಿರುಂದ ಗ್ರಾಮದ ಕೊಟ್ಟೂರ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು ವರರು   

ಮುಳಗುಂದ: ಇಲ್ಲಿಗೆ ಸಮೀಪದ ಯಲಿಶಿರೂರ ಗ್ರಾಮದ ಶ್ರೀ ಕೊಟ್ಟೂರ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀಶರಣ ಬಸವೇಶ್ವರ ಪುರಾಣ ಮಂಗಲೋತ್ಸವದ ಅಂಗವಾಗಿ ಗ್ರಾಮಸ್ಥರ ಸಹಯೋಗದಲ್ಲಿ ಶುಕ್ರವಾರ ಸಾಮೂಹಿಕ ವಿವಾಹಗಳು ಜರುಗಿದವು.

ಕಾರ್ಯಕ್ರಮದ ಸಾನಿದ್ಯ ವಹಿದ್ದ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ಸಾಮೂಹಿ ವಿವಾಹಗಳಿಂದ ಸಮಾಜದಲ್ಲಿ ಸಮಾನತೆ ಮೂಡುತ್ತದೆ. ನೂತನ ದಂಪತಿಗಳು ಒಬ್ಬರಿಗೊಬ್ಬರು ಅರಿತುಕೊಂಡು ಬಾಳು ನಡೆಸಬೇಕು ಎಂದರು.

ಮಹಾಲಿಂಗೇಶ್ವರ ಮಠದ ಚನ್ನವೀರ ಸ್ವಾಮೀಜಿ, ಮುಖಂಡರಾದ ಮಲ್ಲಪ್ಪ ಬಳ್ಳಾರಿ, ಮಹೇಶ ಶಿರಹಟ್ಟಿ, ಚಂದ್ರು ಹಳ್ಳಿ,ನಾಗರಾಜ ಕುಂದ್ರಳ್ಳಿ,ಮಲ್ಲಿಕಾರ್ಜುನ ಕಳಸಾಪೂರ, ಶಿವಾನಂದ ಹೊನ್ನಪ್ಪನವರ,ರಮೇಶ ಕದಡಿ, ಕೊಟ್ರೇಶ ಕುಂದ್ರಳ್ಳಿ ಹಾಗೂ ಭೋಗೇಶ್ವರ ಭಜನಾ ಸಂಘ, ಕೊಟ್ಟೂರ ಬಸವೇಶ್ವರ ಯುವಕ ಮಂಡಳಿ ಸದಸ್ಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.