ADVERTISEMENT

ಲಕ್ಷ್ಮೇಶ್ವರ: ಪಾದಯಾತ್ರೆ ಮೂಲಕ ಹಜ್ ಯಾತ್ರೆಗೆ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:37 IST
Last Updated 22 ಮೇ 2024, 15:37 IST
ಪಾದಯಾತ್ರೆ ಮೂಲಕ ಹಜ್‍ಗೆ ಪ್ರಯಾಣ ಬೆಳೆಸಿರುವ ಶಿರಹಟ್ಟಿ ಪಟ್ಟಣದ ಮಹಮ್ಮದ್ ಫಜಲ್ ಶೇಕ್ ಅವರು ಅವರು ಮಂಗಳವಾರ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಸಂದಂರ್ಭದಲ್ಲಿ ಅವರನ್ನು ಮುಸ್ಲಿ ಬಾಂಧವರು ಸನ್ಮಾನಿಸಿದರು
ಪಾದಯಾತ್ರೆ ಮೂಲಕ ಹಜ್‍ಗೆ ಪ್ರಯಾಣ ಬೆಳೆಸಿರುವ ಶಿರಹಟ್ಟಿ ಪಟ್ಟಣದ ಮಹಮ್ಮದ್ ಫಜಲ್ ಶೇಕ್ ಅವರು ಅವರು ಮಂಗಳವಾರ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಸಂದಂರ್ಭದಲ್ಲಿ ಅವರನ್ನು ಮುಸ್ಲಿ ಬಾಂಧವರು ಸನ್ಮಾನಿಸಿದರು   

ಲಕ್ಷ್ಮೇಶ್ವರ: ಶಿರಹಟ್ಟಿ ಪಟ್ಟಣದ ಮಹಮ್ಮದ್ ಫಜಲ್ ಶೇಕ್ ಅವರು ಮಂಗಳವಾರ ಪಾದಯಾತ್ರೆ ಮೂಲಕ ಹಜ್‍ಗೆ ಪ್ರಯಾಣ ಬೆಳೆಸಿದರು.

ಶಿರಹಟ್ಟಿ ಪಟ್ಟಣದಿಂದ ಹೊರಟ ಅವರು ಲಕ್ಷ್ಮೇಶ್ವರಕ್ಕೆ ಆಗಮಿಸಿದಾಗ ಅವರಿಗೆ ಮುಸ್ಲಿಂ ಸಹೋದರರು ಆದರದಿಂದ ಬರಮಾಡಿಕೊಂಡು ಸನ್ಮಾನಿಸಿದರು. ನಂತರ ಅವರು ದೂದಪೀರಾಂ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಅಂದಾಜು ಎಂಟು ಸಾವಿರ ಕಿಮೀ ದೂರವನ್ನು ಅವರು ಪಾದಯಾತ್ರೆ ಮೂಲಕ ಕ್ರಮಿಸಲಿದ್ದಾರೆ. ಈ ಸಂದರ್ಭದಲ್ಲಿ ಮೌಲ್ವಿಗಳಾದ ಮಹಮ್ಮದ್ ಹಫೀಜ್ ಸಾದಿಕ್ ಜಮಖಂಡಿ, ಮಹಮ್ಮದ್ ಖಯೂಮ್, ಹಫೀಜ್ ಉಸ್ಮಾನ್, ಮಹಮ್ಮದ್ ಹಫೀಜ್ ಶಕೀಲ್ ಮತ್ತು ಮುಸ್ಲಿಂ ಸಮಾಜದ ಜನತೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.