ADVERTISEMENT

ಲಕ್ಷ್ಮೇಶ್ವರ | ಪ್ಲಾಸ್ಟಿಕ್ ಮಾರಾಟ: ಪುರಸಭೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 12:52 IST
Last Updated 25 ಜುಲೈ 2024, 12:52 IST
ಲಕ್ಷ್ಮೇಶ್ವರದಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಗುರುವಾರ ಮಹೇಶ ಹಡಪದ ಮತ್ತು ಅಧಿಕಾರಿಗಳು ಗುರುವಾರ ದಾಳಿ ನಡೆಸಿ  ಪ್ಲಾಸ್ಟಿಕ್‍ ವಸ್ತುಗಳನ್ನು ವಶಕ್ಕೆ ಪಡೆದರು
ಲಕ್ಷ್ಮೇಶ್ವರದಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಗುರುವಾರ ಮಹೇಶ ಹಡಪದ ಮತ್ತು ಅಧಿಕಾರಿಗಳು ಗುರುವಾರ ದಾಳಿ ನಡೆಸಿ  ಪ್ಲಾಸ್ಟಿಕ್‍ ವಸ್ತುಗಳನ್ನು ವಶಕ್ಕೆ ಪಡೆದರು   

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟದ ನಿಷೇಧ ಇದ್ದರೂ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‍‍, ಪ್ಲಾಸ್ಟಿಕ್ ಲೋಟಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ತಿಳಿದು ಗುರುವಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ದಿಢೀರ್‌ ದಾಳಿ ನಡೆಸಿದರು. ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು 'ಸರ್ಕಾರ ಪ್ಲಾಸ್ಟಿಕ್ ಮಾರಾಟವನ್ನು ರದ್ದುಪಡಿಸಿದೆ. ಆದರೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕೆಲವರು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍‍, ಪ್ಲಾಸ್ಟಿಕ್ ಲೋಟಗಳನ್ನು ಮಾರಾಟ ಮಾಡುತ್ತಿದ್ದರು. ಅಂಥವರ ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಕೊಳ್ಳಲಾಗಿದೆ. ಮತ್ತು ನಿಯಮ ಉಲ್ಲಂಘಟಿಸಿದವರಿಂದ ₹36 ಸಾವಿರ ದಂಡ ವಸೂಲಿ ಮಾಡಲಾಗಿದೆ' ಎಂದರು.

'ಪುರಸಭೆಯಿಂದ ಪರವಾನಿಗೆ ಪಡೆದು ಅಂಗಡಿಯನ್ನು ನಡೆಸಬೇಕು. ಪುರಸಭೆಗೆ ಕಾಲಕಾಲಕ್ಕೆ ತುಂಬಬೇಕಾದ ಎಲ್ಲ ರೀತಿಯ ತೆರಿಗೆಗಳನ್ನು ಪಾವತಿಸಬೇಕು ಮತ್ತು ಅಂಗಡಿಗಳ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಳ್ಳಬೇಕು' ಎಂದು ಹೇಳಿದರು.

ADVERTISEMENT

ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ಲ ಸೇರಿದಂತೆ ಇನ್ನಿತರ ಪುರಸಭೆಯ ಸಿಬ್ಬಂದಿ ವರ್ಗದವರು ಪೌರ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.