ನರಗುಂದ: ತಾಲ್ಲೂಕಿನ ಕುರಗೋವಿನಕೊಪ್ಪದ ಮಹೇಶ ಪಾಂಡಪ್ಪ ನಾಯ್ಕರ ನರಗುಂದದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಹತ್ತು ವರ್ಷಗಳ ಹಿಂದೆ ₹44,500 ಅಲ್ಪಾವಧಿ ಸಾಲ ಪಡೆದಿದ್ದರು. ಅದು 2017ರಲ್ಲಿ ಮನ್ನಾ ಆಗಿದೆ. ಆದರೂ ಸಾಲ ತುಂಬುವಂತೆ ಪದೇ ಪದೇ ಬ್ಯಾಂಕ್‌ನಿಂದ ನೋಟಿಸ್ ಬರುತ್ತಿದೆ. ಇದರಿಂದ ರೈತ ಮಹೇಶ ಆತಂಕಗೊಂಡಿದ್ದಾರೆ. ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಹಶೀಲ್ದಾರ್‌ಗೆ ತಿಳಿಸಿದ್ದಾರೆ.
‘ನಾನು ಪಡೆದ ಸಾಲ 2017ರಲ್ಲಿ ಮನ್ನಾ ಆಗಿದೆ. ಈ ಬಗ್ಗೆ ಸರ್ಕಾರದಿಂದ ಆದೇಶ ಪತ್ರ ಕೂಡ ಬಂದಿದೆ. ನನ್ನ ಅಲ್ಪಾವಧಿ ಸಾಲಮನ್ನಾ ಆಗಿದ್ದರೂ ಸಹ ಸಹಕಾರಿ ಬ್ಯಾಂಕ್‌ನವರು ಸಾಲ ವಸೂಲಾತಿ ಕುರಿತು ನೋಟಿಸ್ ಕಳಿಸುತ್ತಿದ್ದಾರೆ. ಆದ್ದರಿಂದ ತಹಶೀಲ್ದಾರ್ ಎ.ಡಿ.ಅಮರಾವದಗಿ ಅವರು ವಿಚಾರಣೆ ನಡೆಸಿ ಸಾಲದಿಂದ ಋಣಮುಕ್ತನನ್ನಾಗಿ ಮಾಡಬೇಕು’ ಎಂದು ರೈತ ಮಹೇಶ ಪಾಂಡಪ್ಪ ನಾಯ್ಕರ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.