ADVERTISEMENT

ಲಕ್ಷ್ಮೇಶ್ವರ | ಶಿವರಾತ್ರಿ: ಹಣ್ಣುಗಳ ಮಾರಾಟ ಜೋರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 15:25 IST
Last Updated 7 ಮಾರ್ಚ್ 2024, 15:25 IST
ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರ ಲಕ್ಷ್ಮೇಶ್ವರದಲ್ಲಿ ಹಣ್ಣುಗಳ ಖರೀದಿಯಲ್ಲಿ ನಿರತರಾಗಿರುವ ಮಹಿಳೆಯರು
ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರ ಲಕ್ಷ್ಮೇಶ್ವರದಲ್ಲಿ ಹಣ್ಣುಗಳ ಖರೀದಿಯಲ್ಲಿ ನಿರತರಾಗಿರುವ ಮಹಿಳೆಯರು   

ಲಕ್ಷ್ಮೇಶ್ವರ: ಹಿಂದೂಗಳ ಪಾಲಿಗೆ ದೊಡ್ಡ ಹಬ್ಬವಾಗಿರುವ ಮಹಾಶಿವರಾತ್ರಿ ಆಚರಣೆ ತಾಲ್ಲೂಕಿನಲ್ಲಿ ರಂಗು ಪಡೆಯುತ್ತಿದ್ದು ಶಿವನ ದೇವಸ್ಥಾನಗಳಲ್ಲಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಉಪವಾಸ ಆಚರಣೆ ಈ ಹಬ್ಬದ ವಿಶೇಷಗಿದ್ದರಿಂದ ಸಾರ್ವಜನಿಕರು ಗುರುವಾರ ಹಣ್ಣುಗಳ ಖರೀದಿಯಲ್ಲಿ ನಿರತರಾಗಿದ್ದರು.

ಶಿವರಾತ್ರಿ ಹಬ್ಬಕ್ಕಾಗಿ ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ, ಖರ್ಜೂರ, ಕರಬೂಜ, ಚಿಕ್ಕು ಸೇರಿದಂತೆ ಮತ್ತಿತರ ಹಣ್ಣುಗಳ ಮಾರಾಟ ಭರದಿಂದ ನಡೆದಿದೆ. ಈ ಬಾರಿ ಕಲ್ಲಂಗಡಿ ಹಣ್ಣಿನ ಇಳುವರಿ ಸ್ವಲ್ಪ ಹೆಚ್ಚಿಗೆ ಬಂದಿದ್ದು ಬೆಲೆ ಕಡಿಮೆಯಿದೆ. ಉಳಿದ ಹಣ್ಣುಗಳ ಬೆಲೆ ಸ್ವಲ್ಪ ಏರುಮುಖವಾಗಿದೆ. ಗುರುವಾರ ಪಟ್ಟಣದ ಮಾರುಕಟ್ಟೆಯಲ್ಲಿ ಜನರು ಹಣ್ಣು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಇನ್ನು ಪಟ್ಟಣದಲ್ಲಿ ಹತ್ತಾರು ಶಿವನ ದೇವಸ್ಥಾನಗಳಿದ್ದು ಶುಕ್ರವಾರದಿಂದ ಶಿವರಾತ್ರಿ ಪೂಜೆ ನಡೆಯಲಿವೆ. ಇತಿಹಾಸ ಪ್ರಸಿದ್ಧ ಸೋಮೇಶ್ವರ, ಬಾಳೇಶ್ವರ, ಗೊಲ್ಲಾಳೇಶ್ವರ, ಲಕ್ಷ್ಮಿಲಿಂಗ, ಸಹಸ್ರಲಿಂಗ, ವಾಚೇಶ್ವರ ದೇವಸ್ಥಾನಗಳಲ್ಲಿ ಶಿವನ ಪೂಜೆ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.