ADVERTISEMENT

ಆಸ್ತಮಾ ರೋಗಿಗಳಿಗೆ ಮಂತ್ರಔಷಧ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 11:41 IST
Last Updated 9 ಜೂನ್ 2023, 11:41 IST
ಮೃಗಶಿರಾ ಮಳೆ ಪ್ರವೇಶಿಸುವ ಸಮಯದಲ್ಲಿ ಗಜೇಂದ್ರಗಡದ ಟಕ್ಕೇದ ದರ್ಗಾದಲ್ಲಿ ಆಸ್ತಮಾ ರೋಗಿಗಳಿಗೆ ಮಂತ್ರಔಷಧ ವಿತರಿಸಲಾಯಿತು
ಮೃಗಶಿರಾ ಮಳೆ ಪ್ರವೇಶಿಸುವ ಸಮಯದಲ್ಲಿ ಗಜೇಂದ್ರಗಡದ ಟಕ್ಕೇದ ದರ್ಗಾದಲ್ಲಿ ಆಸ್ತಮಾ ರೋಗಿಗಳಿಗೆ ಮಂತ್ರಔಷಧ ವಿತರಿಸಲಾಯಿತು   

ಗಜೇಂದ್ರಗಡ: ‘ಯುವಕರು ದುಶ್ಚಟಗಳಿಗೆ ದಾಸರಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಹೀಗಾಗಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್‌ ನಿಜಾಮುದ್ದಿನ್‌ಶಾ ಮಕಾನದಾರ ಹೇಳಿದರು.

ಮೃಗಶೀರ ಮಳೆ ನಕ್ಷತ್ರ ಪ್ರವೇಶದ ನಿಮಿತ್ತ ಪಟ್ಟಣದ ಟೆಕ್ಕೇದ ದರ್ಗಾದಲ್ಲಿ ಗುರುವಾರ ಆಸ್ತಮಾ ರೋಗಿಗಳಿಗೆ ಮಾತ್ರೆ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಧೂಮಪಾನ, ಮಧ್ಯಪಾನ ಮಾಡುವುದರಿಂದ ಶ್ವಾಸಕೋಶ ಸೇರಿದಂತೆ ದೇಹದ ಇತರ ಅಂಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಆಸ್ತಮಾದಂತ ರೋಗಗಳು ಬರುತ್ತವೆ. ಹೀಗಾಗಿ ಯುವಕರು ದುಶ್ಚಟಗಳಿಂದ ದೂರವಿರಬೇಕು’ ಎಂದು ಹೇಳಿದರು.

ADVERTISEMENT

‘ಅಸ್ತಮಾ ಎನ್ನುವುದು ಕೆಲವು ಜನರನ್ನು ಜೀವಮಾನವಿಡೀ ಕಾಡುತ್ತಲೇ ಇರುತ್ತದೆ. ಇದು ಆನುವಂಶೀಯವಾಗಿಯೂ ಬರಬಹುದು ಅಥವಾ ಬೇರೆ ಕಾರಣಗಳಿಂದಲೂ ಬರಬಹುದು. ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಆಸ್ತಮಾ ನಿಯಂತ್ರಿಸಬಹುದು’ ಎಂದು ಡಾ.ಶಿವಕುಮಾರ ಹುದ್ದಾರ ತಿಳಿಸಿದರು.

ದರ್ಗಾದ ಆವರಣದಲ್ಲಿ ಸಂಜೆ 5.15ಕ್ಕೆ ಬೇರೆ ಬೇರೆ ಊರುಗಳಿಂದ ಬಂದಿದ್ದ ಜನರಿಗೆ ಮಂತ್ರ ಔಷಧ ವಿತರಣೆ ಮಾಡಲಾಯಿತು.

ಎಸ್.ಐ. ಪತ್ತಾರ, ಎಂ.ಎಸ್. ಮಕನದಾರ, ಮಾಸುಮಲಿ‌ ಮದಗಾರ, ಎಸ್.ಎಸ್. ನರೇಗಲ್, ಮೈನು ಮಕಾನದಾರ, ಮುರ್ತುಜ ಖಾದ್ರಿ ಮದಗಾರ, ಪಾಷಾ ಹವಾಲ್ದಾರ್, ದಾವಲಸಾಬ ತಾಳಿಕೋಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.