ADVERTISEMENT

ನರೇಗಲ್: ಪವನ್‌ ವಿದ್ಯುತ್‌ ಕಂಪನಿಯಿಂದ ಮರಗಳ ಹನನ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 14:42 IST
Last Updated 25 ಫೆಬ್ರುವರಿ 2024, 14:42 IST
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಸರಹದ್ದಿನ ಹೊಲಗಳಲ್ಲಿ ಬಹುರಾಷ್ಟ್ರೀಯ ಪವನ್‌ ವಿದ್ಯುತ್‌ ಖಾಸಗಿ ಕಂಪನಿಯವರು ಕಾಮಗಾರಿಗಾಗಿ ಗಿಡಗಳನ್ನು ನಾಶಪಡಿಸಿರುವುದು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಸರಹದ್ದಿನ ಹೊಲಗಳಲ್ಲಿ ಬಹುರಾಷ್ಟ್ರೀಯ ಪವನ್‌ ವಿದ್ಯುತ್‌ ಖಾಸಗಿ ಕಂಪನಿಯವರು ಕಾಮಗಾರಿಗಾಗಿ ಗಿಡಗಳನ್ನು ನಾಶಪಡಿಸಿರುವುದು   

ನರೇಗಲ್: ಸಮೀಪದ ಜಕ್ಕಲಿ ಗ್ರಾಮ ಹಾಗೂ ಸುತ್ತಮುತ್ತಲಿನ ‌ ಗ್ರಾಮಗಳ ಹೊಲಗಳಲ್ಲಿ ಪವನ್‌ ವಿದ್ಯುತ್‌ ಕಂಬಗಳನ್ನು ಅಳವಡಿಸುವ ಸಲುವಾಗಿ ಬಹುರಾಷ್ಟ್ರೀಯ ಪವನ್‌ ವಿದ್ಯುತ್‌ ಖಾಸಗಿ ಕಂಪನಿಯು ಕಾಮಗಾರಿಗಾಗಿ ರಸ್ತೆ ಬದಿ ಹಾಗೂ ಹೊಲಗಳಲ್ಲಿದ್ದ ದೊಡ್ಡ ಗಿಡಗಳನ್ನು ನಾಶಪಡಿಸಿದೆ ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ ಆರೋಪ ಮಾಡಿದರು.

ಬೇವು ಹಾಗೂ ಇತರೆ ಮರಗಳನ್ನು ಕತ್ತರಿಸಿರುವುದು ಖಂಡನೀಯ. ಕಾಮಗಾರಿ ಮಾಡುವ ಪ್ರತಿಯೊಂದು ಮಾರ್ಗದಲ್ಲೂ ಅಂದಾಜು 10ಕ್ಕೂ ಹೆಚ್ಚು ಗಿಡಗಳನ್ನು ನಾಶಪಡಿಸುತ್ತಿದ್ದಾರೆ. ಸಂಬಂಧಪಟ್ಟವರು ಕಂಪನಿ ವಿರುದ್ದ ಕ್ರಮಕ್ಕೆ ಮುಂದಾಗದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಸರಹದ್ದಿನ ಹೊಲಗಳಲ್ಲಿ ಬಹುರಾಷ್ಟ್ರೀಯ ಪವನ್‌ ವಿದ್ಯುತ್‌ ಖಾಸಗಿ ಕಂಪನಿಯವರು ತಮ್ಮ ಕಾಮಗಾರಿಗಾಗಿ ಗಿಡಗಳನ್ನು ನಾಶಪಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT