ADVERTISEMENT

ನರೇಗಲ್ | ಪಾರ್ಕಿಂಗ್‌ ಸಮಸ್ಯೆ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 13:58 IST
Last Updated 13 ಜೂನ್ 2024, 13:58 IST
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣದ ಹಿಂಬದಿ ದುರ್ಗಾ ಹೋಟೆಲ್‌ ಎದುರು ಗುರುವಾರ ಬೆಳಿಗ್ಗೆ ಖಾಸಗಿ ವಾಹನಗಳನ್ನು ನಿಲ್ಲಿಸಲಾಗಿದ್ದರಿಂದ ಬಸ್ ಸಂಚಾರಕ್ಕೆ ತೊಂದರೆ ಉಂಟಾಯಿತು
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣದ ಹಿಂಬದಿ ದುರ್ಗಾ ಹೋಟೆಲ್‌ ಎದುರು ಗುರುವಾರ ಬೆಳಿಗ್ಗೆ ಖಾಸಗಿ ವಾಹನಗಳನ್ನು ನಿಲ್ಲಿಸಲಾಗಿದ್ದರಿಂದ ಬಸ್ ಸಂಚಾರಕ್ಕೆ ತೊಂದರೆ ಉಂಟಾಯಿತು   

ನರೇಗಲ್:‌ ಪಟ್ಟಣದ ಹೊಸ ಬಸ್‌ ನಿಲ್ದಾಣದ ಹಿಂದುಗಡೆ ಡಬಲ್‌ ರಸ್ತೆಯಲ್ಲಿ, ದುರ್ಗಾ ಹೊಟೆಲ್‌ ಹಾಗೂ ಅದರ ಸುತ್ತಲೂ ಖಾಸಗಿ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿರುವ ಕಾರಣ ನಿತ್ಯ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ಡಬಲ್‌ ರಸ್ತೆಯಲ್ಲಿ ವಿಭಜಕ ಹಾಕಿರುವ ಕಾರಣ ಅಲ್ಲಿನ ತಿರುವಿನಲ್ಲಿ ಹಾಗೂ ಬಸ್‌ ನಿಲ್ದಾಣದ ಹಿಂದುಗಡೆಯ ರಸ್ತೆ ಕಿರಿದಾಗಿದೆ. ಒಂದು ವಾಹನ ನಿಂತರೂ ಸಾಕು, ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತದೆ.

‘ಅಲ್ಲಿನ ಎಟಿಎಂ, ಹೋಟೆಲ್‌ ಹಾಗೂ ಪಕ್ಕದ ಇತರೆ ಅಂಗಡಿಗಳ ಎದುರು ಬೈಕ್‌ಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ಗದಗ ಕಡೆಯಿಂದ ಬಸ್‌ ನಿಲ್ದಾಣದ ಒಳಗೆ ಪ್ರವೇಶ ಮಾಡುವಾಗ ಬಸ್‌ಗಳಿಗೆ ತೊಂದರೆಯಾಗುತ್ತದೆ. ಚಾಲಕ ಸ್ವಲ್ಪ ಯಾಮಾರಿದರೂ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಸ್‌ ನಿಲ್ದಾಣದ ಹಿಂದುಗಡೆ ಪಾರ್ಕಿಂಗ್‌ ಸೌಲಭ್ಯಕ್ಕೆ ವ್ಯವಸ್ಥೆ ಮಾಡಬೇಕು ಮತ್ತು ವಿಭಜಕ ತೆರವುಗೊಳಿಸಿ, ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಜಗದೀಶ ಬಂಡಿವಡ್ಡರ ಆಗ್ರಹಿಸಿದ್ದಾರೆ.

ADVERTISEMENT

‘ಗದಗ ಕಡೆಯಿಂದ ಬಂದು ತಿರುವಿನಲ್ಲಿ ಬಸ್‌ ಚಾಲನೆ ಮಾಡುವಾಗ ಎರಡು ಬಾರಿ ತೊಂದರೆ ಅನುಭವಿಸಿದ್ದೇನೆ. ಒಂದು ಬಾರಿ ಬೈಕ್‌ಗೆ ಡಿಕ್ಕಿಯಾಗಿ ಜನರ ಜೊತೆಯಲ್ಲಿ ಕಿರಿಕಿರಿ ಅನುಭವಿಸಿದೆ, ಮತ್ತೊಮ್ಮೆ ವ್ಯಕ್ತಿಯೊಬ್ಬರು ಡಿವೈಡ್‌ರ ದಾಟಿ ಬರುವಾಗ ಬಸ್‌ ಎದುರಿಗೆ ಒಮ್ಮೆಲೆ ಬಂದಿದ್ದರಿಂದ ತೊಂದರೆ ಆಯಿತು’ ಎಂದು ಬಸ್ ಚಾಲಕ ಹನಮಂತಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.