ADVERTISEMENT

ರೋಣ | ಕುಡಿಯುವ ನೀರಿನಲ್ಲಿ ಹುಳ ಹುಪ್ಪಟೆ

ಎಚ್ಚೆತ್ತುಗೊಳ್ಳದ ಪುರಸಭೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 5:20 IST
Last Updated 10 ಮಾರ್ಚ್ 2024, 5:20 IST
5 ಮತ್ತು 6 ನೇ ವಾರ್ಡಗಳಿಗೆ ಸರಬರಾಜ ಆದ ನೀರಿನಲ್ಲಿ ಕಂಡುಬಂದ ಹುಳುಗಳು
5 ಮತ್ತು 6 ನೇ ವಾರ್ಡಗಳಿಗೆ ಸರಬರಾಜ ಆದ ನೀರಿನಲ್ಲಿ ಕಂಡುಬಂದ ಹುಳುಗಳು   

ರೋಣ: ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಕುಡಿಯುವ ನೀರಿಗೆ ಎಲ್ಲೆಡೆ ಹಾಹಾಕಾರ ಎದ್ದಿದೆ. ಸಮರ್ಪಕ, ಶುದ್ಧ ನೀರು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಸರಬರಾಜಾಗುವ ನೀರಿನಲ್ಲಿ ಹುಳು ಹುಪ್ಪಟೆಗಳು ಕಂಡು ಬರುತ್ತಿದ್ದು, ಸಾರ್ವಜನಿಕರು ಆಂತಕಕ್ಕೆ ಸಿಲುಕಿದ್ದಾರೆ.

ರೋಣ ಪಟ್ಟಣದ 5 ಹಾಗೂ 6 ವಾರ್ಡಿನಲ್ಲಿ ಪುರಸಭೆಯಿಂದ ಸರಬರಾಜಾಗುತ್ತಿರುವ ನೀರಿನಲ್ಲಿ ಕಳೆದ ಹಲವು ದಿನಗಳಿಂದ ಕಲುಷಿತ ನೀರು ಮಿಶ್ರಣಗೊಂಡು ನೀರಿನಲ್ಲಿ ಹುಳ ಹುಪ್ಪಟೆಗಳು ಕಂಡು ಬರುತ್ತಿವೆ. ಅನೇಕ ಬಡ ಕುಟುಂಬಗಳು ರೈತಾಪಿ ವರ್ಗದ ಜನರೇ ವಾಸಿಸುವ ಈ ವಾರ್ಡಿನಲ್ಲಿ ಪುರಸಭೆಯಿಂದ ಪೂರೈಸುವ ನೀರೇ ಕುಡಿಯಲು ಆಧಾರವಾಗಿದೆ. 

ಅಲ್ಲದೇ ಜಾನುವಾರಗಳಿಗೂ ಕುಡಿಯಲು ಇದೇ ನೀರು ಬಳಕೆ ಮಾಡುತ್ತಿರುವುದರಿಂದ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಅನೇಕ ರೋಗ ರುಜಿನಗಳು ಹರಡುವ ಆತಂಕ ಇಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.

ADVERTISEMENT

ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿ, ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಈ ರೀತಿ ಸಮಸ್ಯೆ ಆಗುತ್ತಿದ್ದು, ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಯಾವೊಬ್ಬ ಅಧಿಕಾರಿಯು ಗಮನ ಹರಿಸುತ್ತಿಲ್ಲ ಎಂಬುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

‘ಬಡ ಜನ ಹಾಗೂ ಜಾನುವಾರಗಳು ಇದೇ ನೀರನ್ನು ಕುಡಿಯಲು ಬಳಸುತ್ತಿದ್ದು ಕಲುಷಿತ ಚರಂಡಿ ನೀರು ಹಾಗೂ ಹುಳು ಹುಪ್ಪೆಗಳು ಮಿಶ್ರಣಗೊಂಡು ಪೂರೈಕೆಯಾಗುತ್ತಿರುವ ನೀರಿನಿಂದ ಅನೇಕ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು’ ನೋವಿನಿಂದ ಪ್ರತಿಕ್ರಿಯೆ ನೀಡಿದರು.

5 ಮತ್ತು 6 ನೇ ವಾರ್ಡಗಳಿಗೆ ಸರಬರಾಜ ಆದ ನೀರಿನಲ್ಲಿ ಕಂಡುಬಂದ ಹುಳುಗಳು
5 ಮತ್ತು 6 ನೇ ವಾರ್ಡಗಳಿಗೆ ಸರಬರಾಜ ಆದ ನೀರಿನಲ್ಲಿ ಕಂಡುಬಂದ ಹುಳುಗಳು

ಸಮರ್ಪಕ, ಶುದ್ಧ ಕುಡಿಯುವ ನೀರಿಗೆ ಆಗ್ರಹ ಮಾಹಿತಿ ನೀಡದ ಪುರಸಭೆ ಅಧಿಕಾರಿ, ಸಿಬ್ಬಂದಿ 5, 6ನೇ ವಾರ್ಡಿನಲ್ಲಿ ತೀವ್ರ ಸಮಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.