ADVERTISEMENT

ವಿಜಯನಗರ ಜಿಲ್ಲೆಗೆ ₹ 85.76 ಕೋಟಿ ಬೆಳೆವಿಮೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:35 IST
Last Updated 18 ಜೂನ್ 2024, 15:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೊಸಪೇಟೆ (ವಿಜಯನಗರ): 2023-24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮೆಕ್ಕೆಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ನವಣೆ, ರಾಗಿ, ಈರುಳ್ಳಿ, ಟೊಮೊಟೊ ಬೆಳೆಗಳಿಗೆ ಬೆಳೆಯ ಮುಂಗಾರು ಹಂಗಾಮಿಗೆ ಒಟ್ಟು ₹ 85.76 ಕೋಟಿ ಬೆಳೆ ವಿಮೆ ಬಿಡುಗಡೆಯಾಗಿದೆ.

ಹೂವಿನಹಡಗಲಿ ತಾಲ್ಲೂಕಿಗೆ ₹ 10.71 ಕೋಟಿ, ಹಗರಿಬೊಮ್ಮನಹಳ್ಳಿ ₹ 2.56ಕೋಟಿ, ಹರಪನಹಳ್ಳಿ ₹ 61.01ಕೋಟಿ, ಹೊಸಪೇಟೆ ₹ 3.088ಕೋಟಿ, ಕೊಟ್ಟೂರು ₹ 4.91ಕೋಟಿ ಹಾಗೂ ಕೂಡ್ಲಿಗಿ ತಾಲ್ಲೂಕಿಗೆ ₹ 6.16 ಕೋಟಿ ಬಿಡುಗಡೆಯಾಗಿದೆ. ಕ್ರಮವಾಗಿ 3,382, 708, 20,394, 212, 2,402, 2,412 ರೈತರು ಈ ಬೆಳೆ ವಿಮೆ ಲಾಭ ಪಡೆದಿದ್ದಾರೆ.

ADVERTISEMENT

ಬೆಳೆ ವಿಮೆಗೆ ನೋಂದಾಯಿಸಿದ ರೈತರು ಬೆಳೆ ವಿಮಾ ಕಂತು ತುಂಬಿದ ಬ್ಯಾಂಕ್‍ ಖಾತೆಯನ್ನು ಪರಿಶೀಲಿಸಿಕೊಳ್ಳಲು ಕೋರಿದೆ. ಅಲ್ಲದೆ ಬೆಳೆ ವಿಮಾ ಜಮೆ ಆಗದಿದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಪ್ರಸಕ್ತ ಸಾಲಿನಲ್ಲಿಯೂ ಸಹ ಉತ್ತಮ ಮಳೆ ಆಗುವುದೆಂಬ ಅಂದಾಜಿರುವುದರಿಂದ ಎಲ್ಲ ರೈತರು ಕಡ್ಡಾಯವಾಗಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.