ADVERTISEMENT

ಸಿದ್ಧಲಿಂಗ ಸ್ವಾಮಿಜಿ ಎರಡನೇ ಬಸವಣ್ಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:47 IST
Last Updated 22 ಅಕ್ಟೋಬರ್ 2024, 14:47 IST
ಡಂಬಳ ಗ್ರಾಮದ ಜಮಲ್ ಶಾವಲಿ ಶರಣರ ದರ್ಗಾದಲ್ಲಿ ಲಿಂ.ತೊಂಟದ ಸಿದ್ಧಲಿಂಗ ಸ್ವಾಮೀಜಿಯ 6ನೇ ವರ್ಷದ ಪುಣ್ಯಸ್ಮರಣೋತ್ಸವ ನಡೆಯಿತು
ಡಂಬಳ ಗ್ರಾಮದ ಜಮಲ್ ಶಾವಲಿ ಶರಣರ ದರ್ಗಾದಲ್ಲಿ ಲಿಂ.ತೊಂಟದ ಸಿದ್ಧಲಿಂಗ ಸ್ವಾಮೀಜಿಯ 6ನೇ ವರ್ಷದ ಪುಣ್ಯಸ್ಮರಣೋತ್ಸವ ನಡೆಯಿತು   

ಡಂಬಳ: ಶಿಕ್ಷಣ ಸಂಸ್ಥೆ ಮಠದ ಅಭಿವೃದ್ಧಿ ಸೇರಿದಂತೆ ಸಮಾನತೆಗಾಗಿ ನಿರಂತರವಾಗಿ ಶ್ರಮಿಸಿದರು. ಅವರ ಅಸಂಖ್ಯ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಕೋಮಸೌಹಾರ್ದ ಪ್ರಶಸ್ತಿ ಸೇರಿದಂತೆ ಹಲವು ಗೌರವ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿಗೆ ಸಲ್ಲುತ್ತದೆ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಡಂಬಳ ಗ್ರಾಮದ ಹಜರತ್ ಜಮಾಲ ಶಾ ವಲಿ ಶರಣರ ದರ್ಗಾದ ಆವರಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಮತ್ತು ದರ್ಗಾ ಸಮಿತಿ ಆಯೋಜಿಸಿದ್ದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿಯ 6ನೇ ವರ್ಷದ ಪುಣ್ಯಸ್ಮರಣೋತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ತೋಂಟದ ಸಿದ್ಧಲಿಂಗ ಸ್ವಾಮೀಜಿ ಎಲ್ಲಾ ಧರ್ಮೀಯರ ಮೇಲೆ ಪ್ರೀತಿ ಹೊಂದಿದ್ದರು. ರೊಟ್ಟಿ ಜಾತ್ರೆಯ ಮೂಲಕ ಜಾತೀಯತೆಯನ್ನು ನಿರ್ಮೂಲನೆ ಮಾಡಿ ಪರಸ್ಪರ ಬಾಂಧವ್ಯ ಬೆಸೆಯುವಂತೆ ಮಾಡುವ ಮೂಲಕ ಆಧುನಿಕ ಕಾಲದ ಎರಡನೇ ಬಸವಣ್ಣರಾಗಿ ತಮ್ಮ ಜೀವನ ಕಳೆದರು ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಬೇರನಹಟ್ಟಿ ಮತ್ತು ಶಿರೋಳದ ಶಾಂತಲಿಂಗ ಸ್ವಾಮೀಜಿ, ಮುಸ್ಲಿಂ ಸಮಾಜದ ಧರ್ಮಗುರುಗಳಾದ ಖಾದರಸಾಬ ಮುಲ್ಲಾ, ಅಂಜುಮನ್‌ ಸಮಿತಿ ಅಧ್ಯಕ್ಷ ಬಶೀರ ಅಹ್ಮದ ತಾಂಬೋಟಿ, ಮಾಜಿ ಸಚಿವ ಎಸ್.ಎಸ್.ಪಾಟೀಲ್, ವಿ.ಎಸ್.ಯರಾಶಿ, ಶಫೀಕ್ ಮೂಲಿಮನಿ, ಬಸವರಡ್ಡಿ ಬಂಡಿಹಾಳ, ಭೀಮಪ್ಪ‌ ಗದಗಿನ, ಖಾಜಾಹುಸೇನ ಹೊಸಪೇಟೆ, ಮಹೇಶ ಗಡಗಿ, ಶರಣು ಬಂಡಿಹಾಳ, ಚಂದ್ರು ಯಳ್ಳಮಲ್ಲಿ, ಜಾಕೀರ ಮೂಲಮನಿ, ಮುರ್ತುಜಾ ಮನಿಯಾರ, ಬುಡ್ನೆಸಾಬ ಅತ್ತಾರ, ಬಾಬುಸಾಬ ಮೂಲಿಮನಿ, ಬಾಬುಸಾಬ್ ಸರ್ಕವಾಸ್, ಡಿ.ಡಿ.ಸೊರಟೂರ, ಜಂದಿಸಾಬ ಸರಕಾವಾಸ, ಗೌಸುಸಾಬ ಆಲೂರ, ಅಲ್ಲಾವುದ್ದೀನ್‌ ಹೊಂಬಳ, ಹುಸೇನಸಾಬ ದೊಡ್ಡಮನಿ, ಸದ್ದಾಂ ರಜಕ್ಕನವರ ಸಮಾಜದ ಹಿರಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.