ADVERTISEMENT

ರೋಣ: ಜಿಟಿಟಿಸಿ ಕಾಲೇಜು ಸ್ಥಾಪನೆಗೆ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:19 IST
Last Updated 16 ಮೇ 2024, 14:19 IST
ರೋಣ ಪಟ್ಟಣದ ಹಳೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಪರಿಶೀಲಿಸಿದ ಜಿಟಿಟಿಸಿ ಅಧಿಕಾರಿಗಳು. ರೋಣ ಶಾಸಕ ಜಿ.ಎಸ್ ಪಾಟೀಲ್ ಪಾಲ್ಗೊಂಡಿದ್ದರು
ರೋಣ ಪಟ್ಟಣದ ಹಳೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಪರಿಶೀಲಿಸಿದ ಜಿಟಿಟಿಸಿ ಅಧಿಕಾರಿಗಳು. ರೋಣ ಶಾಸಕ ಜಿ.ಎಸ್ ಪಾಟೀಲ್ ಪಾಲ್ಗೊಂಡಿದ್ದರು   

ರೋಣ: ಪ್ರಸಕ್ತ ವರ್ಷದ ರಾಜ್ಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರದಿಂದ ಘೋಷಿಸಲಾದ ಜಿಟಿಟಿಸಿ ಮಹಾವಿದ್ಯಾಲಯ ಸ್ಥಾಪನೆಗೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಪಟ್ಟಣದಲ್ಲಿ ಗುರುವಾರ ಸ್ಥಳ ಪರಿಶೀಲನೆ ನಡೆಸಿತು.

ರೋಣ ಪಟ್ಟಣದ ಸದ್ಯ ಖಾಲಿಯಿರುವ ಸ್ಥಳಾಂತರಿತ ಬಸನಗೌಡ ಗಿರಡ್ಡಿ ಪ್ರಥಮದರ್ಜೆ ಕಾಲೇಜಿನ ಕಟ್ಟಡದಲ್ಲಿ ಸ್ಥಳ‌ ಪರಿಶೀಲನೆ ನಡೆಸಿದ ತಂಡ ತಾತ್ಕಾಲಿಕವಾಗಿ ಕಾಲೇಜು ಪ್ರಾರಂಭಿಸಲು ತೀರ್ಮಾನಿಸಿದ್ದು, ಪ್ರಸಕ್ತ ವರ್ಷದಿಂದಲೇ ತರಗತಿಗಳನ್ನು ಪ್ರಾರಂಭಿಸಲು ಯೋಜಿಸಿರುವುದಾಗಿ ಸ್ಥಳ ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳ ತಂಡ ಮಾಹಿತಿ ನೀಡಿದೆ.

ಈ ವೇಳೆ ಮಾತನಾಡಿದ ರೋಣ ಶಾಸಕ ಜಿ.ಎಸ್ ಪಾಟೀಲ, ರೋಣ ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ಮತ್ತು ನಿರುದ್ಯೋಗ ನಿರ್ಮೂಲನೆಯ ಕ್ರಮವಾಗಿ ಜಿಟಿಟಿಸಿ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರೋಣ ಪಟ್ಟಣದ ಬಸನಗೌಡ ಗಿರಡ್ಡಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ಜಿಟಿಟಿಸಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು ಪ್ರಸಕ್ತ ಸಾಲಿನಿಂದಲೇ ಪ್ರಾರಂಭವಾಗಲು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.

ADVERTISEMENT

‘ಅತಿ ಶೀಘ್ರದಲ್ಲಿ ಅಲ್ಪಾವಧಿ ಕೋರ್ಸುಗಳು ಪ್ರಾರಂಭವಾಗಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ವರ್ಷ ನಾಲ್ಕು ವರ್ಷದ 4 ರೆಗ್ಯುಲರ್ ಕೋರ್ಸುಗಳಿಗೆ ಅನುಮತಿ ಪಡೆಯಲಾಗಿದೆ. ಪ್ರತಿ ಕೋರ್ಸಿಗೆ 60 ರಂತೆ ಒಟ್ಟು 240 ವಿದ್ಯಾರ್ಥಿಗಳ ಪ್ರವೇಶಾತಿಗೆ ಶೀಘ್ರದಲ್ಲಿ ಸೂಕ್ತ ಜಾಗ ಹುಡುಕಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಈ ವೇಳೆ ಜಿಟಿಟಿಸಿ ಉನ್ನತ ಅಧಿಕಾರಿಗಳು ಹಿರಿಯ ಮುಖಂಡ ಮಾಜಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್ ಪಾಟೀಲ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಬಸವರಾಜ ನವಲಗುಂದ, ಎಸ್.ಎಸ್ ದಾನಪ್ಪಗೌಡ್ರ,ಯಲ್ಲಪ್ಪ ಕಿರೇಸೂರ, ಬಿ.ಎಸ್ ಬಲಕುಂದಿ ಇದ್ದರು.

ರೋಣ ಪಟ್ಟಣದ ಹಳೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಪರಿಶೀಲಿಸಿದ ಜಿಟಿಟಿಸಿ ಅಧಿಕಾರಿಗಳು ರೋಣ ಶಾಸಕ ಜಿ ಎಸ್ ಪಾಟೀಲ್ ಮತ್ತು ಇತರರು
ರೋಣ ಪಟ್ಟಣದ ಹಳೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಪರಿಶೀಲಿಸಿದ ಜಿಟಿಟಿಸಿ ಅಧಿಕಾರಿಗಳು ರೋಣ ಶಾಸಕ ಜಿ ಎಸ್ ಪಾಟೀಲ್ ಮತ್ತು ಇತರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.