ADVERTISEMENT

ಹಿರಿಯರ ಮಾರ್ಗದರ್ಶನ ಜೀವನಕ್ಕೆ ಶ್ರೀರಕ್ಷೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 16:23 IST
Last Updated 5 ಜೂನ್ 2024, 16:23 IST
ನರಗುಂದ ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ ಬ್ರಹ್ಮಲೀನ ಶಂಕರಾನಂದ ಮಹಾಸ್ವಾಮಿಗಳ 20 ನೇ ಪುಣ್ಯಸ್ಮರಣೋತ್ಸವದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ನರಗುಂದ ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ ಬ್ರಹ್ಮಲೀನ ಶಂಕರಾನಂದ ಮಹಾಸ್ವಾಮಿಗಳ 20 ನೇ ಪುಣ್ಯಸ್ಮರಣೋತ್ಸವದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.   

ನರಗುಂದ: ಹಿರಿಯರಿಗೆ, ವಯೋವೃದ್ಧರಿಗೆ ಗೌರವ ನೀಡಬೇಕು. ಅವರ ಜೀವನ ನಮ್ಮೆಲ್ಲರಿಗೆ ಆದರ್ಶ. ಅವರ ಮಾರ್ಗದರ್ಶನ ಜೀವನಕ್ಕೆ ಶ್ರೀರಕ್ಷೆ ಯಾಗಿದೆ ಎಂದು ಅಭಿನವ ಯಚ್ಚರೇಶ್ವರ ಶ್ರೀಗಳು ಹೇಳಿದರು.

ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿಗಳ ಗವಿಮಠದಲ್ಲಿ ಸೋಮವಾರ ರಾತ್ರಿ ನಡೆದ ಬ್ರಹ್ಮಲೀನ ಶಂಕರಾನಂದ ಮಹಾಸ್ವಾಮಿಗಳ 20 ನೇ ಪುಣ್ಯಸ್ಮರಣೋತ್ಸವ ಹಾಗೂ ಹಿರಿಯ ನಾಗರಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅವರ ನಡೆದು ಬಂದ ದಾರಿ, ಎದುರಿಸಿದ ಕಷ್ಟಗಳು ನಮ್ಮೆಲರಿಗೂ ಮಾದರಿ. ಆದರೆ ಇಂದಿನ ದಿನಗಳಲ್ಲಿ ಮಕ್ಕಳು, ಮೊಮ್ಮಕ್ಕಳು ಕೇವಲ ಹಿರಿಯರು ಗಳಿಸಿಟ್ಟ ಆಸ್ತಿಯತ್ತ ಗಮನಹರಿಸಿ, ಅವರನ್ನು ಸರಿಯಾಗಿ ಪೋಷಿಸುತ್ತಿಲ್ಲ. ಇದು ಸಲ್ಲದು. ಎಲ್ಲರೂ ಹಿರಿಯರನ್ನು ಗೌರವಿಸಿ,ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವಂತೆ ಯಚ್ಚರೇಶ್ವರ ಶ್ರೀ ಸಲಹೆ ಮಾಡಿದರು.
ಹೊಳೆ ಆಲೂರಿನ ಅಲಮೆಂದ್ರ ಶ್ರೀ ಮಾತನಾಡಿ
ಹಿರಿಯರನ್ನು ನಿರ್ಲಕ್ಷ್ಯ ಮಾಡಿದರೆ ಅದರಂಥಹ ಮಹಾಪಾಪ ಮತ್ತೊಂದಿಲ್ಲ. ಪ್ರತಿಯೊಬ್ಬರೂ ತಂದೆ, ತಾಯಿಗಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕೆಂದರು.ಲಿಂಗನಬಂಡಿಯ ಉಳವೆಂದ್ರ ಶ್ರೀ ಮಾತನಾಡಿದರು. ಪ್ರಾಸ್ತಾವಿಕವಾಗಿ ಬಾಪುಗೌಡ ತಿಮ್ಮನಗೌಡ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ 85 ವರ್ಷ ಮೇಲ್ಪಟ್ಟ ಸುಮಾರು 30 ಜನ ವಯೋವೃದ್ದರನ್ನ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಕಾಶಗೌಡ ತಿರಕನಗೌಡ್ರ, ಎಸ್.ವೈ. ಮುಲ್ಕಿಪಾಟೀಲ, ಸಂಜಯ್ ಕಲಾಲ, ರಮೇಶ ಚಾಗಣ್ಣವರ್, ದೇವರಾಜ ಜಂಗವಾಡ, ಬಸಣ್ಣ ಕುಪ್ಪಸ್ತ, ಗಣೇಶ ಹೊರಪೇಟೆ, ಶ್ರೀಕಾಂತ ದೊಡಮನಿ, ಶಿವಾನಂದ ಕೊಂತಿಕಲ್, ಶರಣಪ್ಪ ಕಾಡಪ್ಪನವರ, ಪ್ರಭಾಕರ ಉಳ್ಳಾಗಡ್ಡಿ ದೊಡ್ಡಸಿದ್ದಪ್ಪ ಪತ್ತಾರ, ಸಣ್ಣಸಿದ್ದಪ್ಪ ಪತ್ತಾರ, ಉಪಸ್ಥಿತರಿದ್ದರು, ಸುನೀಲ ಕಳಸದ ನಿರೂಪಿಸಿದರು.ಹೆಚ್ ವಿ ಬ್ಯಾಡಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT