ADVERTISEMENT

ವಿನಯ್‌ ಕುಲಕರ್ಣಿ ಅಪರಾಧಿಯಲ್ಲ, ಆರೋಪಿ ಅಷ್ಟೇ: ತೋಂಟದ ಶ್ರೀ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 12:54 IST
Last Updated 8 ನವೆಂಬರ್ 2020, 12:54 IST
ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ
ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ    

ಗದಗ: ‘ವಿನಯ್‌ ಕುಲಕರ್ಣಿ ಅಪರಾಧಿಯಲ್ಲ; ಆರೋಪಿ ಅಷ್ಟೇ. ಇಂತಹ ವಿಚಾರದೊಳಗೆ ರಾಜಕೀಯ ಹಸ್ತಕ್ಷೇಪ ನಡೆಯಬಾರದು. ನ್ಯಾಯ ಸಮ್ಮತ ವಿಚಾರಣೆ ನಡೆದು ವಿನಯ್‌ ಕುಲಕರ್ಣಿ ಅವರು ನಿರಪರಾಧಿಯಾಗಿ ಹೊರಬರಬೇಕು ಎಂಬ ಆಶಯ ನಮ್ಮದು’ ಎಂಬ ಅಭಿಪ್ರಾಯವನ್ನು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ವ್ಯಕ್ತಪಡಿಸಿದರು.

ಗದುಗಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಕೊಲೆ ಆದ ಸಂತ್ರಸ್ತರು ಹಾಗೂ ವಿನಯ್ ಕುಲಕರ್ಣಿ ಇಬ್ಬರು ಲಿಂಗಾಯಿತರೇ. ಸಿಬಿಐನವರು ವಿಚಾರಣೆ ನಡೆಸಿದ್ದು, ಅದು ನ್ಯಾಯ ಸಮ್ಮತವಾಗಿ ನಡೆಯಬೇಕು. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರ ನಂಬಿಕೆ ಮತ್ತು ಗೌರವ ಇದ್ದು, ಸಿಬಿಐನವರು ಕೂಡ ನ್ಯಾಯಯುತವಾದ ವಿಚಾರಣೆ ನಡೆಸುತ್ತಾರೆ ಎಂಬ ಆಶಾಭಾವ ಇದೆ’ ಎಂದು ಹೇಳಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐನವರು ಬಂಧಿಸಿ, ವಿಚಾರಣೆ ನಡೆಸುತ್ತಿರುವ ಹಿನ್ನಲೆಯಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳ ನೇತೃತ್ವದಲ್ಲಿ ಭಾನುವಾರ ಸಭೆ ನಡೆಯಿತು. ಸಭೆಯಲ್ಲಿ ಕೂಡಲ ಸಂಗಮದ ಜಯಬಸವ ಮೃತ್ಯುಂಜಯ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.