ADVERTISEMENT

ಸಾರಿಗೆ ಸಂಸ್ಥೆ ಉಳಿವಿಗಾಗಿ ಪಾದಯಾತ್ರೆ

ರೋಣದಿಂದ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದವರೆಗೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:53 IST
Last Updated 9 ಆಗಸ್ಟ್ 2024, 15:53 IST
ರೋಣ ಬಸ್‌ನಿಲ್ದಾಣದಲ್ಲಿ ಗಾಂಧಿವಾದಿ ಮುತ್ತಣ್ಣ ತಿರ್ಲಾಪುರ ಕೈಗೊಂಡ ಪಾದಯಾತ್ರೆ ಕಾರ್ಯಕ್ರಮದಲ್ಲಿ ಗುರುಪಾದ ಸ್ವಾಮೀಜಿ ಮಾತನಾಡಿದರು
ರೋಣ ಬಸ್‌ನಿಲ್ದಾಣದಲ್ಲಿ ಗಾಂಧಿವಾದಿ ಮುತ್ತಣ್ಣ ತಿರ್ಲಾಪುರ ಕೈಗೊಂಡ ಪಾದಯಾತ್ರೆ ಕಾರ್ಯಕ್ರಮದಲ್ಲಿ ಗುರುಪಾದ ಸ್ವಾಮೀಜಿ ಮಾತನಾಡಿದರು   

ರೋಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಉಳಿವಿಗಾಗಿ ಮತ್ತು ಸಿಬ್ಬಂದಿಯ ಹಿತರಕ್ಷಣೆಗಾಗಿ ಸಾರ್ವಜನಿಕ ಜಾಗೃತಿ ಮೂಡಿಸಲು ತಾಲೂಕಿನ ಕರ್ಕಿ ಕಟ್ಟಿ ಗ್ರಾಮದ ಗಾಂಧಿವಾದಿ ಮುತ್ತಣ್ಣ ತಿರ್ಲಾಪುರವರು ರೋಣ ಬಸ್ ನಿಲ್ದಾಣದಿಂದ ಶುಕ್ರವಾರ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಆರಂಭಿಸಿದರು.

ಪಾದಯಾತ್ರೆಯ ಪ್ರಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ‘ಕರ್ನಾಟಕದ ಹೆಮ್ಮೆಯಾದ ಕೆಎಸ್ಆರ್‌ಟಿಸಿಯನ್ನು ಉಳಿಸಿ ಬೆಳೆಸುವುದು ಕೇವಲ ಸರ್ಕಾರದ ಕೆಲಸವಲ್ಲ. ನಮ್ಮೆಲ್ಲರ ಕೆಲಸವಾಗಿದೆ. ಸೇವೆಗೆ ಮತ್ತೊಂದು ಹೆಸರೇ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಾಗಿದ್ದು ಇಂತಹ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲಾ ಚಾಲಕ ಮತ್ತು ನಿರ್ವಾಹಕರೊಂದಿಗೆ ಜನತೆ ಸಹಕಾರದಿಂದ ವರ್ತಿಸಬೇಕು‘ ಎಂದರು.

ಅಬ್ದುಲ್ ಸಾಬ್ ಹೊಸಮನಿ ಅವರು, ‘ದೇಶದ ಅರ್ಥ ವ್ಯವಸ್ಥೆಗೆ ಸಾರಿಗೆ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದ್ದು ಇಡೀ ಏಷ್ಯಾ ಖಂಡದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನದೇ ಆದ ಉತ್ತಮ ಸೇವೆಯ ಮೂಲಕ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಹೆಸರು ಸಂಪಾದಿಸಿದ್ದು ಬಸ್ಸುಗಳಿಗೆ ಬೆಂಕಿ ಇಡುವುದಾಗಲಿ ಹಾನಿ ಮಾಡುವುದಾಗಲಿ ಮಾಡದೆ ಇದು ನಮ್ಮ ಸ್ವತ್ತು ಎಂದು ತಿಳಿದು ಪ್ರತಿಯೊಬ್ಬ ನಾಗರಿಕರು ಅದರ ರಕ್ಷಣೆ ಮಾಡಬೇಕು‘ ಎಂದರು.

ADVERTISEMENT

ಸಾರಿಗೆ ಸಂಸ್ಥೆಯ ಪರ ಜಾಗೃತಿ ಪಾದಯಾತ್ರೆ ಕೈಗೊಂಡ ಮುತ್ತಣ್ಣ ತಿರ್ಲಾಪುರ ಅವರನ್ನು ಅಬ್ದುಲ್ ಸಾಬ್ ಹೊಸಮನಿ ಅಭಿಮಾನಿ ಬಳಗ ಹಾಗೂ ರೋಣ ಘಟಕದ ನಿವೃತ್ತ ಚಾಲಕ ಪರಸಪ್ಪ ಜಿಗಳೂರ ಅವರಿಂದ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಚಿತ್ರಗಾರ, ನಿವೃತ್ತ ಇಂಜಿನಿಯರ್ ಜಗದೀಶ ಮಡಿವಾಳರ, ನಿವೃತ್ತ ಎಪಿಎಂಸಿ ಕಾರ್ಯದರ್ಶಿ ಮಹದೇವಪ್ಪ ಹೊಸಮನಿ, ಅಬ್ದುಲ್ ಸಾಬ್ ಹೊಸಮನಿ ಅಭಿಮಾನಿ ಬಳಗದ ಅಧ್ಯಕ್ಷ ಶಂಕರ ದಂಡಿನ, ರೈತ ಸಂಘದ ಕಾರ್ಯದರ್ಶಿ ದೊಡ್ಡಬಸಪ್ಪ ನವಲಗುಂದ, ಸಿದ್ದಪ್ಪ ಗದಗಿನ, ಮುತ್ತಣ್ಣ ಕಟಗೇರಿ ಸೇರಿದಂತೆ ಇತರರು ಇದ್ದರು.

ರೋಣ ಬಸ್ ನಿಲ್ದಾಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು
ರೋಣ ಬಸ್ ನಿಲ್ದಾಣದಿಂದ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದವರೆಗೆ ಮುತ್ತಣ್ಣ ತಿರ್ಲಾಪುರ ಸಾರಿಗೆ ಸಂಸ್ಥೆ ಉಳಿವಿಗಾಗಿ ಪಾದಯಾತ್ರೆ ಕೈಗೊಂಡರು
ರೋಣ ಬಸ್ ನಿಲ್ದಾಣದಿಂದ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದವರೆಗೆಮುತ್ತಣ್ಣ ತಿರ್ಲಾಪುರ ಸಾರಿಗೆ ಸಂಸ್ಥೆ ಉಳಿವಿಗಾಗಿ ಪಾದಯಾತ್ರೆ ಕೈಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.