ಮುಳಗುಂದ: ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಮುಳಗುಂದದ ಯೋಧ ರವಿಕುಮಾರ ಕಟ್ಟಮನಿ ಹುತಾತ್ಮರಾಗಿದ್ದಾರೆ ಎಂದುಕೊಂಡು ಅವರ ಮನೆಯವರಿಗೆ ಸರ್ಕಾರಿ ನೌಕರಿ, ಜಮೀನು ನಿಡುವುದಾಗಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಭರವಸೆ ನೀಡಿದ ಎಡವಟ್ಟು ಗುರುವಾರ ನಡೆಯಿತು.
ಆದರೆ ಯೋಧ ಈಗಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಸ್ಥಳೀಯ ನಾಯಕರು ನೀಡಿದ ತಪ್ಪು ಮಾಹಿತಿಯಿಂದಾಗಿ ಆಭಾಸ ಉಂಟಾಗಿದೆ.
ಬಿಜೆಪಿಯ ಜನಾರ್ಶೀವಾದ ಯಾತ್ರೆ ಅಂಗವಾಗಿ ಸಚಿವರು ಮುಳಗುಂದದಲ್ಲಿ ಯೋಧರೊಬ್ಬರ ಮನೆ ಭೇಟಿ ನೀಡುವ ಕಾರ್ಯಕ್ರಮ ಇದಾಗಿತ್ತು. ನಿಗದಿತ ಸಮಯಕ್ಕಿಂತ ತಡವಾಗಿ ಅವಸರದಲ್ಲಿ ಬಂದ ಅವರು ತರಾತುರಿಯಲ್ಲಿ ಯೋಧನ ಕುಟುಂಬದವರ ಯೋಗಕ್ಷೇಮ ವಿಚಾರಿಸಿ, ಜಮೀನು ಹಾಗೂ ಯೋಧನ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು. ಆದರೆ ಕುಟುಂಬಸ್ಥರಿಗೆ ಏನು ತಿಳಿಯಲೇ ಇಲ್ಲ.
ಆಗ ಅಲ್ಲೇ ಇದ್ದ ಕಾರ್ಯಕರ್ತನೊಬ್ಬ ಕರ್ತವ್ಯದಲ್ಲಿರುವ ಯೋಧ ರವಿಕುಮಾರಗೆ ವಿಡಿಯೊ ಕರೆ ಮಾಡಿ ಮಾತನಾಡಿಸಿದರು. ನಂತರ ಸಚಿವರು ಕುಟುಂಬದವರಿಗೆ ಗೌರವಿಸಿ ನಡೆದರು.
ರಾಜು ಕುರಡಗಿ, ಬಿಜೆಪಿ ಗದಗ ಗ್ರಾಮೀಣ ಮಂಡಳದ ಅಧ್ಯಕ್ಷ ದ್ಯಾಮಣ್ಣ ನೀಲಗುಂದ, ಸ್ಥಳೀಯ ಘಟಕದ ಅಧ್ಯಕ್ಷ ಮೋಹನ ಮದ್ದಿನ, ಮಹಾಂತೇಶ ಬಾತಾಖಾನಿ ಹಾಗೂ ಬಿಜೆಪಿ ಕಾರ್ಯತರ್ಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.