ADVERTISEMENT

ಲಕ್ಷ್ಮೇಶ್ವರ: ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ಗೋವನಾಳದಲ್ಲಿ ಗ್ರಾಮ ವಾಸ್ತವ್ಯ: ಗ್ರಾಮಸ್ಥರಿಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:02 IST
Last Updated 20 ಮಾರ್ಚ್ 2022, 5:02 IST
ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳೊಂದಿಗೆ ಮಧ್ಯಾಹ್ನ ಊಟ ಮಾಡಿದರು
ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳೊಂದಿಗೆ ಮಧ್ಯಾಹ್ನ ಊಟ ಮಾಡಿದರು   

ಲಕ್ಷ್ಮೇಶ್ವರ: ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ಗೋವನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿಎಂ.ಸುಂದರೇಶ ಬಾಬು ಗ್ರಾಮ ವಾಸ್ತವ್ಯ ನಡೆಸಿದರು.

ಜಿಲ್ಲಾಧಿಕಾರಿ, ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯದರ್ಶಿ ಭರತ ಎಸ್, ಉಪಕಾರ್ಯದರ್ಶಿ ಬಿ.ಕಲ್ಲೇಶ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ತಾ.ಪಂ ಇಒ ಆರ್.ವೈ. ಗುರಿಕಾರ. ಸಿ.ಆರ್. ಮುಂಡರಗಿ ಅವರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹೂಮಾಲೆ ಹಾಕಿ, ತಿಲಕ ಇಟ್ಟು, ಆರತಿ ಬೆಳಗಿ ಸ್ವಾಗತಿಸಿದರು.

ಶಾಸಕ ರಾಮಣ್ಣ ಲಮಾಣಿ ಶಾಲಾ ಪೌಷ್ಟಿಕ ತೋಟದಲ್ಲಿನ ಸಸಿಗಳಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.

ADVERTISEMENT

ಶಾಸಕ ಹಾಗೂ ಅಧಿಕಾರಿಗಳ ತಂಡ ಪ್ರಾಥಮಿಕ ಶಾಲೆಯಲ್ಲಿನ ನೂತನ ಅಡುಗೆ ಕೊಠಡಿ, ಅಂಗನವಾಡಿ ಕೇಂದ್ರ ಉದ್ಘಾಟಸಿದರು. ನಂತರ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಸ್ಮಶಾನ ಭೂಮಿ ಹಾಗೂ ಘನತ್ಯಾಜ್ಯ ಘಟಕಗಳ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿಕಾರರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.

ಒಡೆಯರ ಮಲ್ಲಾಪೂರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಾಲೆಯಲ್ಲಿಯೇ ಮಕ್ಕಳೊಂದಿಗೆ ಊಟ ಮಾಡಿದ್ದು ವಿಶೇಷವಾಗಿತ್ತು. ನಂತರ ಗೋವನಾಳದ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿ
ಸಮಸ್ಯೆ ಪರಿಹಾರ ಕೋರಿ ಬಂದಿರುವ ಅರ್ಜಿಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಗ್ರಾ.ಪಂ ಅಧ್ಯಕ್ಷೆ ಸುಶೀಲವ್ವ ಮರಿಲಿಂಗನಗೌಡರ, ಗ್ರಾ.ಪಂ ಉಪಾಧ್ಯಕ್ಷೆ ಸುಧಾ ಮಾದರ, ಮಂಜನಗೌಡ ಕೆಂಚನಗೌಡರ, ಪದ್ಮರಾಜ ಪಾಟೀಲ, ನಿರ್ಮಲಾ ತಳವಾರ, ನಾಗರತ್ನಾ ಕಡಾರಿ, ಅಪ್ಪಣ್ಣ ರಾಮಗೇರಿ, ಭರಮಣ್ಣ ರೊಟ್ಟಿಗವಾಡ, ನಾಗರಾಜ ದೊಡ್ಡಮನಿ, ಚಂದ್ರು ತಳವಾರ, ಶೇಖರಗೌಡ ಕೊರಡೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.