ಹೊಳೆನರಸೀಪುರ: ಎರಡು ರೈಲುಗಳು ಒಂದೇ ಪ್ಲಾಟ್ ಫಾರಂಗೆ ಬಂದಿದ್ದು, ಒಂದು ರೈಲಿನ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಮೈಸೂರು– ಅರಸೀಕೆರೆ ಹಾಗೂ ಅರಸೀಕೆರೆ– ಮೈಸೂರು ರೈಲುಗಳು ಹೊಳೆನರಸೀಪುರ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್‌ಗೆ ಬಂದಿವೆ. ಆದರೆ ಗೇಟ್ ಹಾಕಿದ್ದು ಗಮನಿಸಿದ ಅರಸೀಕೆರೆ– ಮೈಸೂರು ರೈಲಿನ ಚಾಲಕ ಪಟ್ಟಣದ ಹೊರವಲಯದಲ್ಲಿಯೇ ರೈಲು ನಿಲ್ಲಿಸಿದ್ದಾರೆ.
ಮೈಸೂರಿನಿಂದ ಹೊರಟಿದ್ದ ರೈಲು 2ನೇ ಪ್ಲಾಟ್‌ಫಾರ್ಮ್‌ಗೆ ಬರಬೇಕಿತ್ತು. ಆದರೆ ಒಂದನೇ ಪ್ಲಾಟ್ ಫಾರ್ಮ್‌ಗೆ ಬಂದಿದೆ. ಅರಸೀಕೆರೆ– ಮೈಸೂರು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ನಂತರ ಸಮಸ್ಯೆ ಸರಿಪಡಿಸಲಾಯಿತು. ಮೈಸೂರು– ಅರಸೀಕೆರೆ ರೈಲು ಚಾಲಕನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.