ADVERTISEMENT

ರೇವಣ್ಣಗೆ 441, ಕುಮಾರಸ್ವಾಮಿಗೆ 531 ಮತ!

ಜಿಲ್ಲೆಯಲ್ಲಿ ಠೇವಣಿ ಕಳೆದುಕೊಂಡ 31 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2018, 9:36 IST
Last Updated 17 ಮೇ 2018, 9:36 IST

ಹಾಸನ: ಜಿಲ್ಲೆಯಲ್ಲಿ ಈ ಬಾರಿ ಒಟ್ಟು 31 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಈ ಪೈಕಿ ಶ್ರವಣಬೆಳಗೊಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಂಜೇಗೌಡ (7,506 ಮತಗಳು) ಮತ್ತು ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ಎಂ.ಎನ್‌.ರಾಜು (3,566 ಮತಗಳು) ಸೇರಿದ್ದಾರೆ.

ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಐಎಂಇಪಿಯ ಜರೀನಾ ತಾಜ್‌ –378, ರಿಪಬ್ಲಿಕ್ ಪಾರ್ಟಿ ಆಫ್‌ ಇಂಡಿಯಾದ ಕೆ.ಎಸ್‌.ನಿರ್ವಾಣಯ್ಯ– 93, ಶಿವಸೇನೆಯ ಸಿ.ಹೇಮಂತ್‌ ಕುಮಾರ್‌–82, ಅಂಬೇಡ್ಕರ್‌ ಜನತಾ ಪಾರ್ಟಿಯ ಧರ್ಮೇಗೌಡ–146, ಲೋಕ ಅವಾಜ್‌ ದಳದ ಎಚ್‌.ಎ.ನಂಜೇಗೌಡ–64 ಹಾಗೂ ಪಕ್ಷೇತರರಾದ ಅಕ್ಮಲ್‌ ಜಾವೀದ್‌–146, ಆರ್‌.ಜಿ.ಸತೀಶ್‌–366, ಕೆ.ಜಿ.ಜಾಕೋಬ್‌–99, ಮಹಮ್ಮದ್‌ ಶರ್ಜೀತ್‌–214 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌.ಬಾಲಕೃಷ್ಣ 1,05,516 ಮತಗಳನ್ನು ಪಡೆದು ಭಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಸಿ.ಎಸ್‌.ಪುಟ್ಟೇಗೌಡ 52,504 ಮತ ಪಡೆದು ಪೈಪೋಟಿ ನೀಡಿದರು. ಬಿಜೆಪಿ ಅಭ್ಯರ್ಥಿ ಶಿವನಂಜೇಗೌಡ –7506, ಎಐಎಂಇಪಿಯ ದ್ವಾರಕೀಶ್‌–415, ಸಾಮಾನ್ಯ ಜನತಾ ಪಾರ್ಟಿಯ ಬೋಜೇಗೌಡ–141 ಮತ ಪಡೆದಿದ್ದಾರೆ. ಇವರು ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ADVERTISEMENT

ಹೊಳೆನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ 1,07,194 ಮತ ಪಡೆದು ಜಯ ಸಾಧಿಸಿದರು. ಬಿಜೆಪಿಯ ಎಂ.ಎನ್.ರಾಜು–3,566, ರಿಪಬ್ಲಿಕನ್‌ ಸೇನಾ ಬಿ.ಕೆ.ನಾಗರಾಜು–936, ಎಐಎಂಇಪಿಯ ಮಹಮ್ಮದ್‌ ಹನೀಫ್‌–277, ಪಕ್ಷೇತರರಾದ ಎಂ.ಮಹೇಶ್‌–295, ಬಿ.ಎನ್‌.ಮಂಜೇಗೌಡ–604 ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅದೇ ಹೆಸರಿನ ಎಚ್‌.ಡಿ.ರೇವಣ್ಣ ಎಂಬುವರು ಕೇವಲ 441 ಮತಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಎಲ್ಲರೂ ನಾಲ್ಕಂಕಿ ತಲುಪಲು ಆಗಿಲ್ಲ.

ಅರಸೀಕೆರೆ ಕ್ಷೇತ್ರದಿಂದ ಆರ್‌ಪಿಐನ ಎನ್‌.ಸಿ. ಚಂದ್ರಶೇಖರ್‌–1354, ಸಾಮಾನ್ಯ ಜನತಾ ಪಾರ್ಟಿಯ ಸಿ.ಬಿ.ಜಗದೀಶ್‌–539, ಎಐಎಂಇಪಿಯ ಸಯೀನಾ–446 ಹಾಗೂ ಬೇಲೂರು ಕ್ಷೇತ್ರದಿಂದ ಶಿವಸೇನಾದ ಎನ್‌.ಆರ್‌.ಅರುಣ್‌–675, ಭಾರತೀಯ ರಿಪಬ್ಲಿಕನ್‌ ಪಾರ್ಟಿಯ ಎಚ್‌.ಬಿ.ಚಂದ್ರಕಾಂತ–438, ಪಕ್ಷೇತರರಾದ ಬಿ.ಟಿ. ತೊಳಚನಾಯಕ–1170, ಎಸ್‌.ಬಿ. ಸಂಗಮೇಶ್‌–525 ಮತ್ತು ಅರಕಲಗೂಡು ಕ್ಷೇತ್ರದಿಂದ ಡಾ.ಅಂಬೇಡ್ಕರ್‌ ಜನತಾ ಪಾರ್ಟಿಯ ಎಚ್‌.ಪಿ.ಮಂಜುನಾಥ್‌–1035, ಆರ್‌ಪಿಐನ ಕೆ.ಎಂ.ಲತಾ–481, ಭಾರತೀಯ ಹೊಸ ಕಾಂಗ್ರೆಸ್‌ನ ಶೇಷೇಗೌಡ–3559, ಎಐಎಂಇಪಿಯ ಎಚ್‌.ಟಿ.ಸತೀಶ್‌ 486 ಮತ ಪಡೆದಿದ್ದಾರೆ.

ಸಕಲೇಶಪುರ ಕ್ಷೇತ್ರದಿಂದ ಎಇಎಂಇಪಿಯ ಕೆ.ಆರ್‌.ಪ್ರದೀಪ್‌ ಕುಮಾರ್‌– 114, ಪಕ್ಷೇತರರಾದ ಎಂ.ಚನ್ನಮಲ್ಲಯ್ಯ–572, ವೀರೇಶ್‌–576 ಮತ ಪಡೆದಿದ್ದಾರೆ. ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅದೇ ಹೆಸರಿನ ಎಚ್.ಕೆ.ಕುಮಾರಸ್ವಾಮಿ ಎಂಬುವರು 531 ಮತಗಳಿಸಲಷ್ಟೇ ಶಕ್ತರಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡವರ ಪೈಕಿ ಕೆಲವರು ಮೂರಂಕಿಯನ್ನೂ ಸಹ ದಾಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.