ಗಂಡಸಿ: ಶನಿವಾರ ಬೆಳಿಗ್ಗೆ ಮೇಯಿಸಲು ಕಾಡಿಗೆ ಹೊಡೆದುಕೊಂಡು ಹೋಗಿದ್ದ 35 ಮೇಕೆಗಳ ಪೈಕಿ ಸಂಜೆ ಮನೆಯತ್ತ ಬರುವಾಗ 13 ಮೇಕೆಗಳು ಮೃತಪಟ್ಟಿರುವ ಘಟನೆ ಹೋಬಳಿಯ ಮುದುಡಿ ಬಿ. ತಾಂಡ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಶಿಕಲಾ ಬಾಯಿ, ಸ್ವಾಮಿ ನಾಯಕ ದಂಪತಿ ತಮ್ಮ ಜೀವನೋಪಾಯಕ್ಕೆ ಮೇಕೆ ಸಾಕಾಣಿಕೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದು, ಪ್ರತಿ ವರ್ಷ ಮೇಕೆ ಮಾರಾಟದಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಮಗಳು ಭೂಮಿಕಾಳನ್ನು ಎಂ.ಎಸ್.ಡಬ್ಲ್ಯೂ. ಓದಿಸುತ್ತಿದ್ದರು.
₹1.15ಲಕ್ಷ ಮೌಲ್ಯದ ಮೇಕೆಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದರಿಂದ ದಂಪತಿಗೆ ಮುಂದೇನು ಗತಿ ಎಂಬ ಚಿಂತೆ ಕಾಡುತ್ತಿದೆ. ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮುದುಡಿ ಬಿ ತಾಂಡ್ಯದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗಂಡಸಿ ಪಶುವೈದ್ಯಾಧಿಕಾರಿ ಕಿಶೋರ್, ಉಳಿದ 22 ಮೇಕೆಗಳಿಗೆ ಚಿಕಿತ್ಸೆ ನೀಡಿದ್ದು, ಆರೋಗ್ಯವಾಗಿವೆ. ‘13 ಮೇಕೆಗಳ ಮರಣೋತ್ತರ ಪರೀಕ್ಷೆ ಮಾಡಿದ್ದು, ಕಾಡಿನಲ್ಲಿ ಬೆಳೆಯುವ ಕಾಡು ಸತ್ತ ಅವರೇ ಸೊಪ್ಪು ತಿಂದು ಮೃತಪಟ್ಟಿರುವ ಸಂಶಯವಿದೆ. ಹೆಚ್ಚಿನ ಪರೀಕ್ಷೆಗಾಗಿ ಹಾಸನದ ಪಶು ವೈದ್ಯಕೀಯ ಕಾಲೇಜಿಗೆ ಕಳಿಸಲಾಗಿದ್ದು, ಅಲ್ಲಿಂದ ವರದಿ ಬಂದ ಮೇಲೆ ಮೇಕೆಗಳ ಸಾವಿನ ಬಗ್ಗೆ ನಿಖರವಾದ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.