ADVERTISEMENT

ವ್ಯವಸ್ಥಿತ ಹಾಸನಾಂಬ ಜಾತ್ರೆಗೆ ಕ್ರಮ: ಸಚಿವ ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:13 IST
Last Updated 31 ಅಕ್ಟೋಬರ್ 2024, 14:13 IST
ಹಾಸನಾಂಬೆ ದರ್ಶನ ಪಡೆದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮೊಹಮ್ಮದ್ ಸುಜೀತಾ, ಸಂಸದ ಶ್ರೇಯಸ್ ಪಟೇಲ್‌ ಸನ್ಮಾನಿಸಿದರು
ಹಾಸನಾಂಬೆ ದರ್ಶನ ಪಡೆದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮೊಹಮ್ಮದ್ ಸುಜೀತಾ, ಸಂಸದ ಶ್ರೇಯಸ್ ಪಟೇಲ್‌ ಸನ್ಮಾನಿಸಿದರು   

ಹಾಸನ: ಹಾಸನಾಂಬ ಜಾತ್ರೆ ಇನ್ನೂ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ವಿಶೇಷ ನಾಡಿನ ಜನ ಸಮುದಾಯಕ್ಕೆ, ರಾಜ್ಯಕ್ಕೆ, ಭರತ‌ ಖಂಡದಲ್ಲಿ ಶಾಂತಿ ನೆಲೆಸಲಿ ಎಂದು ದೇವಿಯನ್ನು ಕೇಳಿದ್ದೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಪತ್ನಿ ಕನ್ನಿಕ ಪರಮೇಶ್ವರಿ ಅವರೊಂದಿಗೆ ಗುರುವಾರ ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಐತಿಹಾಸಿಕ ದರ್ಶನ ಭಾಗ್ಯ ನನಗೆ ಹಾಗೂ ನನ್ನ ಶ್ರೀಮತಿಗೆ ದೊರಕಿದ್ದು ಪುಣ್ಯ ಎಂದು ಭಾವಿಸುತ್ತೇನೆ.4–5 ವರ್ಷಗಳ ಹಿಂದೆ ದೇವಿಯ ದರ್ಶನ ಪಡೆದಿದ್ದೆ‌ ಎಂದರು.

ನಿಗೂಢ ವಿಚಾರದಲ್ಲಿ ತಾಯಿಯನ್ನು ಭಕ್ತಿಯಿಂದ ಪೂಜೆ ಮಾಡುತ್ತೇವೆ. ಮೂರು ವರ್ಷದ ಹಿಂದೆ ಇದ್ದ ಭಕ್ತರ ಸಂಖ್ಯೆ ಇಂದು ಹೆಚ್ಚಿದೆ. ಪ್ರತಿ ದಿನ ಲಕ್ಷಾಂತರ ಮಂದಿ ದರ್ಶನ ಪಡೆಯುತ್ತಿದ್ದಾರೆ. ಭಕ್ತಿ ಇಟ್ಟುಕೊಂಡಿದ್ದಾರೆ. ರಾಜ್ಯವಲ್ಲದೆ ಪಕ್ಕದ ರಾಜ್ಯದಿಂದಲೂ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ ಎಂದರು.

ADVERTISEMENT

ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ನೋಡಿಕೊಂಡು ಬಂದೆ. ಈ ಬಾರಿ 3 ಪಟ್ಟು ಜನ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವೆ. ಡಿಸಿ, ಎಸ್ಪಿ, ಐಜಿ, ಸಂಸದ ಶ್ರೇಯಸ್, ಜನಪ್ರತಿನಿಧಿಗಳು ಸೇರಿ ಆಡಳಿತ ವ್ಯವಸ್ಥೆ ಮೂಲಕ ಜನರಿಗೆ ತೊಂದರೆ ಅಗದಂತೆ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.

ಸಣ್ಣಪುಟ್ಟ ಘಟನೆ ನಡೆಯುವುದು ಸಹಜ, ನಿಭಾಯಿಸಬೇಕು. ಇನ್ನು ಮೂರು ದರ್ಶನ ಬಾಕಿ ‌ಇದ್ದು, ಸುಕ್ತ ಬಂದೋಬಸ್ತ್ ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಐಜಿ‌ಗೆ ಸೂಚನೆ ನೀಡಿದ್ದೇನೆ. ಎಚ್ಚರಿಕೆಯಿಂದ ಜನರಿಗೆ ತೊಂದರೆ ಅಗದಂತೆ ಸೂಕ್ತ ಸೌಲಭ್ಯ ಒದಗಿಸಲು ತಾಕೀತು ಮಾಡಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.