ಅರಸೀಕೆರೆ: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ 2024-25ನೇ ಸಾಲಿನ ಕೃಷಿ ಮತ್ತು ತಂತ್ರಜ್ಞಾನ ವಿಸ್ತರಣಾ ಕಾರ್ಯಕ್ರಮದಡಿ, ಇಂದಿನಿಂದ 17.11.24ರವರೆಗೆ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ‘ಕೃಷಿ ಮೇಳ-2024’ ಆಯೋಜಿಸಲಾಗಿದೆ.
ಈ ಮೇಳಕ್ಕೆ ಅರಸೀಕೆರೆ ತಾಲ್ಲೂಕಿನ ರೈತರು ಭೇಟಿ ನೀಡಿ ಕೃಷಿಯಲ್ಲಿ ನೂತನ ತಾಂತ್ರಿಕತೆ ಬಗ್ಗೆ ಹಾಗೂ ಆವಿಷ್ಕಾರಗಳ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಕೃಷಿ ಇಲಾಖೆ, ಅರಸೀಕೆರೆಯಿಂದ ಆತ್ಮ ಹಾಗೂ ರಿವಾರ್ಡ್ ಯೋಜನೆಗಳಡಿ ಇದೇ 16 ರಂದು ತಾಲ್ಲೂಕಿನಿಂದ ರೈತರನ್ನು ಜಿ.ಕೆ.ವಿ.ಕೆ, ಕೃಷಿ ಕಾಲೇಜು ಆವರಣ, ಬೆಂಗಳೂರಿನಲ್ಲಿ ನಡೆಯುವ ಕೃಷಿ ಮೇಳಕ್ಕೆ ಕರೆದುಕೊಂಡು ಹೋಗಲು ಮೂರು ಬಸ್ ವ್ಯವಸ್ಥೆ ಮಾಡಲಾಗಿದೆ.
ಆಸಕ್ತ ರೈತರು ಇಂದು (ನ.15) ಸಂಜೆ 5 ಗಂಟೆಯೊಳಗೆ ತಮ್ಮ ವ್ಯಾಪ್ತಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು, ದೂರವಾಣಿ, ಪಹಣಿ ಹಾಗೂ ಆಧಾರ್ ಪ್ರತಿಯೊಂದಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಲು ಕೋರಲಾಗಿದೆ. ಮೊದಲು ಬಂದು ನೋಂದಣಿ ಮಾಡಿಸಿದ ರೈತರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಅರಸೀಕೆರೆ ಇಲ್ಲಿ ಸಂಪರ್ಕಿಸಲು ಕೋರಿದೆ.
ಕಸಬಾ, ಅರಸೀಕೆರೆ-ಶ್ರೀಮತಿ ದೀಪ್ತಿ ಪಾಟೀಲ್-8884009569, ಬಾಣಾವರ ಹಾಗೂ ಡಿ.ಎಂ.ಕುರ್ಕೆ- ಶ್ರೀಮತಿ ಪ್ರಭಾವತಿ-8884009556, ಗಂಡಸಿ ಹಾಗೂ ಜಾವಗಲ್- ಶ್ರೀ ಸುಬ್ರಮಣ್ಯ-8884009561 ಸಂಪರ್ಕಿಸಬೇಕಾಗಿ ಎ.ಪಿ.ಶಿವಕುಮಾರ್ ಸಹಾಯಕ ಕೃಷಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.