ADVERTISEMENT

ಅರಕಲಗೂಡು ದಸರಾ ತಾಲ್ಲೂಕಿನ ಸಾಂಸ್ಕೃತಿಕ ಹೆಮ್ಮೆ ; ಶಾಸಕ ಎ. ಮಂಜು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:59 IST
Last Updated 3 ಅಕ್ಟೋಬರ್ 2024, 16:59 IST
ಅರಕಲಗೂಡಿನಲ್ಲಿ ಗುರುವಾರ 2024 ರ ದಸರಾ ಉತ್ಸವವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು .
ಅರಕಲಗೂಡಿನಲ್ಲಿ ಗುರುವಾರ 2024 ರ ದಸರಾ ಉತ್ಸವವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು .   

ಅರಕಲಗೂಡು: ಪಟ್ಟಣದಲ್ಲಿ ವೈಭವದಿಂದ ನಡೆಯುತ್ತಿರುವ ದಸರಾ ಉತ್ಸವ ತಾಲ್ಲೂಕಿನ ಸಾಂಸ್ಕೃತಿಕ ಹೆಮ್ಮೆಯಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ಅರಕಲಗೂಡು ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಬಹಳ ಹಿಂದಿನಿಂದಲೂ ದಸರಾ ಉತ್ಸವ ನಡೆದು ಬಂದಿತ್ತು. ಕಾರಣಾಂತರಿಂದ ಕೆಲಕಾಲ ಸ್ಥಗಿತಗೊಂಡಿದ್ದ ಇದಕ್ಕೆ 24 ವರ್ಷಗಳ ಹಿಂದೆ ಮರುಚಾಲನೆ ನೀಡಿ ವೈಭವದಿಂದ ನಡೆಸಿಕೊಂಡು ಬರುತ್ತಿದ್ದು ರಾಜ್ಯದಾದ್ಯಂತ ಗಮನ ಸೆಳೆದಿದೆ ಎಂದರು. 2025ಕ್ಕೆ ದಸರಾ ಉತ್ಸವಕ್ಕೆ ಮರು ಚಾಲನೆ ನೀಡಿ 25 ವರ್ಷ ಗಳಾಗಲಿದ್ದು ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಕ್ರಮ ವಹಿಸುವುದಾಗಿ ಹೇಳಿದರು.

10 ದಿನಗಳ ಕಾಲ ನಡೆಯುವ ದಸರಾ ಉತ್ಸವದಲ್ಲಿ ಮಹಿಳಾ ದಸರಾ, ನೌಕರರ ದಸರಾ, ಯುವದಸರಾ, ಪರಿಸರ ದಸರಾ, ರೈತರ ದಸರಾ, ಭೂಮಿದಸರಾ, ಪಂಚಾಯತ್ ರಾಜ್ ದಸರಾ ಆಯೋಜಿಸಲಾಗಿದೆ. ಆಯುಧ ಪೂಜೆಯಂದು ಪಪಮ ಕಚೇರಿ ಆವರಣದಲ್ಲಿ ಸರ್ಕಾರಿ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಲಿದೆ. ವಿಜಯದಶಮಿಯಂದು ವಿವಿಧ ದೇವತೆಗಳ ಅದ್ದೂರಿ ಮೆರವಣಿಗೆ ಬನ್ನಿಮಂಟಪಕ್ಕೆ ತೆರಳಿದೆ. ವಿವಿಧ ಕಲಾ ತಂಡಗಳು, ಸ್ಥಬ್ಬದ ಚಿತ್ರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮೆರುಗು ನೀಡಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ADVERTISEMENT

ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಪೀಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ದಸರಾ ಸಮಿತಿ ಅಧ್ಯಕ್ಷ ಹಾಗೂ ಚಿಲುಮೆ ಮಠದ ಮಠಾಧೀಶ ಜಯದೇವ ಸ್ವಾಮೀಜಿ, ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, , ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಪಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಪ್, ಸದಸ್ಯೆ ಲಕ್ಷ್ಮಮ್ಮ ತಹಶೀಲ್ದಾರ್ ಕೆ.ಸಿ.ಸೌಮ್ಯ ಉಪಸ್ಥಿತರಿದ್ದರು. 2024ರ ದಸರಾ ುತ್ಸವದ ಪೋಸ್ಟರ್ ಗಳನ್ನು ಬಿಡುಗಡೆಮಾಡಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ಶರನ್ನವರಾತ್ರಿ ಪೂಜೆ ಪ್ರಾರಂಭ: ಪಟ್ಟಣದ ಪುರಾಣಪ್ರಸಿದ್ದ ಅಮೃತೇಶ್ವರ ಸ್ವಾಮಿ ದೇವಾಲಯದ ಪಾರ್ವತಿ ದೇವಿ ಆಲಯದಲ್ಲಿ ಶರನ್ನವರಾತ್ರಿ ಉತ್ಸವ ಗುರುವಾರ ಪ್ರಾರಂಭವಾಯಿತು.

ಅರಕಲಗೂಡಿನಲ್ಲಿ ಗುರುವಾರ ನಡೆದ 2024 ರ ದಸರಾ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಅನಾವರಣಗೊಳಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.