ADVERTISEMENT

ಹಾಸನ: ಅರ್ಟಿಸ್ಟ್ರಿ ಬ್ರಾಂಡೆಡ್ ಚಿನ್ನ– ವಜ್ರಾಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 13:44 IST
Last Updated 19 ಜನವರಿ 2024, 13:44 IST
ಹಾಸನದ ಮಲಬಾರ್ ಗೋಲ್ಡ್‌ ಆಂಡ್‌ ಡೈಮಂಡ್‌ ಮಳಿಗೆಯಲ್ಲಿ ಅರ್ಟಿಸ್ಟ್ರಿ ಬ್ರಾಂಡೆಡ್ ಜ್ಯುವೆಲ್ಲರಿ ಶೋ ಚಿನ್ನ ಮತ್ತು ವಜ್ರಆಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು
ಹಾಸನದ ಮಲಬಾರ್ ಗೋಲ್ಡ್‌ ಆಂಡ್‌ ಡೈಮಂಡ್‌ ಮಳಿಗೆಯಲ್ಲಿ ಅರ್ಟಿಸ್ಟ್ರಿ ಬ್ರಾಂಡೆಡ್ ಜ್ಯುವೆಲ್ಲರಿ ಶೋ ಚಿನ್ನ ಮತ್ತು ವಜ್ರಆಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು   

ಹಾಸನ: ನಗರದ ಬಿ.ಎಂ. ರಸ್ತೆಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್‌ನ ಮಳಿಗೆಯಲ್ಲಿ ಅರ್ಟಿಸ್ಟ್ರಿ ಬ್ರಾಂಡೆಡ್ ಜ್ಯುವೆಲ್ಲರಿ ಶೋ ಚಿನ್ನ ಮತ್ತು ವಜ್ರಆಭರಣಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಈ ಪ್ರದರ್ಶನವು ಜನವರಿ 22 ರವರೆಗೆ ನಡೆಯಲಿದೆ.

ಗ್ರಾಹಕರಾದ ಡಾ.ಶ್ವೇತಾ ಸ್ವರೂಪ್, ‘ಮೈನ್’ ವಜ್ರಾಭರಣ ಸಂಗ್ರಹವನ್ನು, ಸಾನಿನ ‘ಪ್ರಶೀಯ’ ಅಮೂಲ್ಯ ರತ್ನಾಭರಣಗಳ ಸಂಗ್ರಹ, ಶ್ರೀಕುಮಾರಿ, ಪ್ರಿಯಾಂಕ ಮತ್ತು ಸಿಂಚನ ಅವರು, ‘ಏರಾ’ ಚಿನ್ನಾಭರಣ ಸಂಗ್ರಹವನ್ನು ಅನಾವರಣಗೊಳಿಸಿದರು.

ಶಾಖಾ ಮುಖ್ಯಸ್ಥ ದಯಾನಂದ್ ಆರ್.ಕೆ. ಮಾತನಾಡಿ, ಈ ವಿಶಿಷ್ಟ ಪ್ರದರ್ಶನದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕೆಲಸಗಳಿಂದ ನಿರ್ಮಿತ ವಿಭಿನ್ನ ಚಿನ್ನಾಭರಣಗಳ ಸಂಗ್ರಹವು ಲಭ್ಯವಿರುತ್ತವೆ ಎಂದು ತಿಳಿಸಿದರು.  ಮೈನ್‌ನಲ್ಲಿ ವಜ್ರಾಭರಣಗಳ ಸಂಗ್ರಹಗಳು, ಡಿವೈನ್‌ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗ್ರಹಗಳು, ಪ್ರೆಶಿಯಾದಲ್ಲಿ ರೂಬಿ ಎಮರಾಲ್ಡ್ ಅಮೂಲ್ಯ ರತ್ನ ಅಭರಣಗಳ ಸಂಗ್ರಹಗಳು, ಎಥಿನಿಕ್ಸ್‌ನಲ್ಲಿ ಕರಕುಶಲತೆಯ ಸೊಬಗಿನ ಪಾರಂಪರಿಕ ಸಂಗ್ರಹಗಳು, ಎರಾದಲ್ಲಿ ಅನ್‌ಕಟ್‌ ವಜ್ರ ಆಭರಣಗಳ ಸಂಗ್ರಹಗಳು, ಜೌಲ್‌ನಲ್ಲಿ ಯುವತಿಯರ ಮನಸೆಳೆಯುವ ಸಂಗ್ರಹಗಳು ಈ ಪ್ರದರ್ಶನದ ವಿಶೇಷತೆಯಾಗಿವೆ ಎಂದು ವಿವರಿಸಿದರು.

ADVERTISEMENT

ಸಹ ಮುಖ್ಯಸ್ಥ ಅದಿತ್, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.