ಸಕಲೇಶಪುರ: ಮಂಗಳೂರು– ಬೆಂಗಳೂರು ನಡುವಿನ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ಗೆ ಸೇರಿದ ಪೈಪ್‌ಲೈನ್ ಕೊರೆದು ಪೆಟ್ರೋಲ್ ಹಾಗೂ ಡೀಸೆಲ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ತಾಲ್ಲೂಕಿನ ಹುರುಡಿ ಗ್ರಾಮದಲ್ಲಿ ಶನಿವಾರ ಪತ್ತೆಯಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜು ಆಗದೆ ಇರುವ ಸಮಯ ತಿಳಿದು ಪೈಲ್‌ಲೈನ್ ಕೊರೆದು ಆ ಸ್ಥಳಕ್ಕೆ ಕಬ್ಬಿಣದ ಕೊಳವೆಯೊಂದನ್ನು ವೆಲ್ಡ್ ಮಾಡಿ ಅಲ್ಲಿಂದ ಮುಂದಕ್ಕೆ ಪೈಪ್ ಒಂದನ್ನು ಅಳವಡಿಸಿ ನಂತರ ಹಿಟಾಚಿ ಯಂತ್ರದಿಂದ ಮಣ್ಣು ಮುಚ್ಚುತ್ತಿದ್ದ ವೇಳೆ ಗ್ರಾಮದ ಕೆಲವರು ಸ್ಥಳಕ್ಕೆ ತೆರಳಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಬಿ.ಬಸವರಾಜು ಸ್ಥಳಕ್ಕೆ ಹಿಟಾಚಿ ವಶಕ್ಕೆ ಪಡೆದಿದ್ದು, ಅದರ ಚಾಲಕ, ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
‘ಈ ದಂಧೆಯ ಹಿಂದೆ ಇನ್ನೂ ಹಲವರ ಕೈವಾಡ ಇರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು’ ಎಂದು ಪಿಎಸ್‌ಐ ಸುದ್ದಿಗಾರರಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.