ADVERTISEMENT

ಹಳೇಬೀಡು | ಮಳೆ ನಲುಗಿದ ಬೀನ್ಸ್‌: ₹2 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 13:42 IST
Last Updated 21 ಅಕ್ಟೋಬರ್ 2024, 13:42 IST
ಹಳೇಬೀಡು ಹೋಬಳಿಯ ಕೊಂಡ್ಲಿ ಗೊಲ್ಲರಟ್ಟಿಯ ಜೋಗಿಹಳ್ಳಿ ದಾಖಲೆಯಲ್ಲಿರುವ ತಮ್ಮಣ್ಣಗೌಡ ಅವರ ಬೀನ್ಸ್ ಮಳೆಯಿಂದಾಗಿ ನೆಲಕಚ್ಚಿದೆ
ಹಳೇಬೀಡು ಹೋಬಳಿಯ ಕೊಂಡ್ಲಿ ಗೊಲ್ಲರಟ್ಟಿಯ ಜೋಗಿಹಳ್ಳಿ ದಾಖಲೆಯಲ್ಲಿರುವ ತಮ್ಮಣ್ಣಗೌಡ ಅವರ ಬೀನ್ಸ್ ಮಳೆಯಿಂದಾಗಿ ನೆಲಕಚ್ಚಿದೆ   

ಹಳೇಬೀಡು: ಮಳೆಯ ಅರ್ಭಟಕ್ಕೆ ಹಳೇಬೀಡು ಹೋಬಳಿಯ ಕೊಂಡ್ಲಿ ಗೊಲ್ಲರಟ್ಟಿಯ ಜೋಗಿಹಳ್ಳಿ ದಾಖಲೆಯಲ್ಲಿ ತಮ್ಮಣ್ಣಗೌಡ ಅವರ ಬೀನ್ಸ್ ಬೆಳೆ ಹಾಳಾಗಿದೆ.

ಒಂದು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿರುವುದರಿಂದ ರೈತರಿಗೆ ₹2 ಲಕ್ಷ ನಷ್ಟವಾಗಿದೆ.

‘ಈಗ ಬಿನ್ಸ್ ಬೆಲೆ ಗಗನಕ್ಕೇರಿದೆ. ಕೆಜಿ ಒಂದಕ್ಕೆ ₹120ರಂತೆ ವರ್ತಕರು ರೈತರಿಂದ ಬಿನ್ಸ್ ಖರೀದಿಸುತ್ತಿದ್ದಾರೆ. ಇರುವ ಒಂದು ಎಕರೆಯಲ್ಲಿ ಬೆಳೆ ನಾಶವಾಗಿರುವುದರಿಂದ ದಿಕ್ಕು ತೋಚದಂತಾಗಿದೆ. ಈವರೆಗೂ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗಿಲ್ಲ. ಬಾರಿ ಬೆಲೆ ಬಂದಿರುವುದರಿಂದ ಆರ್ಥಿಕವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇಟ್ಟಿದ್ದೆ. ಕೊಯ್ಲು ಸಂದರ್ಭ ಮಳೆ ಬಂದು ಬೆಳೆ ಹಾಳಾಗಿದ್ದರಿಂದ ಕೈಯಿಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತಾಗಿದೆ’ ಎಂದು ತಮ್ಮಣ್ಣಗೌಡ ಅಳಲು ತೋಡಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.