ಚನ್ನರಾಯಪಟ್ಟಣ: ಎಚ್.ಎಸ್. ಶ್ರೀಕಂಠಯ್ಯ ರಚಿಸಿರುವ ‘ನನ್ನೊಳಗಿನ ನಾನು’ ಕೃತಿಯನ್ನು ಜನವರಿ 28 ರಂದು ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ನಿವೃತ್ತ ಸಹಪ್ರಾಧ್ಯಾಪಕ ಎಚ್. ಸಿದ್ದೇಗೌಡ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದು ಮಿನಿ ಕಾದಂಬರಿ ರೀತಿಯಲ್ಲಿದೆ. ಕೃತಿಕಾರ ಎಚ್.ಎಸ್. ಶ್ರೀಕಂಠಯ್ಯ ಮಾತನಾಡಿ, ಎಚ್.ಡಿ. ದೇವೇಗೌಡ, ಸಿ.ಎಸ್. ಪುಟ್ಟೇಗೌಡ, ಗಂಗಣ್ಣ ಜತೆಗಿನ ರಾಜಕೀಯ ಒಡನಾಟ. ರಾಜಕೀಯ,ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿರುವುದನ್ನು ಈ ಕೃತಿಯಲ್ಲಿ ದಾಖಲು ಮಾಡಿದ್ದೇನೆ. ಒಂದು ಸಾವಿರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು. ಪ್ರಮುಖರಾದ ಆರ್.ಕೆ. ನಲ್ಲೂರು ಪ್ರಸಾದ್, ಸಿ.ಎಸ್. ಪುಟ್ಟೇಗೌಡ, ಎ.ಈ. ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಸಲಹಾ ಸಮಿತಿ ಸದಸ್ಯ ಮುದ್ದೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು. ಮುಖಂಡ ಎ.ಸಿ. ಆನಂದ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.