ADVERTISEMENT

ಟಿಎಪಿಸಿಎಂಎಸ್‌: ಚಂದ್ರಕಲಾ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:22 IST
Last Updated 22 ಜೂನ್ 2024, 14:22 IST
ಚನ್ನರಾಯಪಟ್ಟಣದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ಚಂದ್ರಕಲಾ ಅವರನ್ನು ರಾಜ್ಯಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಶನಿವಾರ ಅಭಿನಂದಿಸಿದರು. ಉಪಾಧ್ಯಕ್ಷ ಎ.ಎಸ್. ಕೃಷ್ಣೇಗೌಡ, ಬಿ.ಎಚ್.ಶಿವಣ್ಣ, ಕುಂಬಾರಹಳ್ಳಿರಮೇಶ್, ಎನ್.ಕೃಷ್ಣೇಗೌಡ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ಚಂದ್ರಕಲಾ ಅವರನ್ನು ರಾಜ್ಯಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಶನಿವಾರ ಅಭಿನಂದಿಸಿದರು. ಉಪಾಧ್ಯಕ್ಷ ಎ.ಎಸ್. ಕೃಷ್ಣೇಗೌಡ, ಬಿ.ಎಚ್.ಶಿವಣ್ಣ, ಕುಂಬಾರಹಳ್ಳಿರಮೇಶ್, ಎನ್.ಕೃಷ್ಣೇಗೌಡ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್) ಅಧ್ಯಕ್ಷೆಯಾಗಿ ಚಂದ್ರಕಲಾ ಅವಿರೋಧ ಆಯ್ಕೆಯಾದರು.

ಅಧ್ಯಕ್ಷರಾಗಿದ್ದ ಕೆ.ಎಂ. ನಂಜಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.

ಸಹಕಾರ ಇಲಾಖೆಯ ಅಭಿವೃದ್ದಿ ಅಧಿಕಾರಿ ಸುನೀಲ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಅಧ್ಯಕ್ಷೆ ಚಂದ್ರಕಲಾ ಮಾತನಾಡಿದರು.

ADVERTISEMENT

ನೂತನ ಅಧ್ಯಕ್ಷೆ ಚಂದ್ರಕಲಾ ಅವರನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಟಿಪಿಸಿಎಂಎಸ್ ಉಪಾದ್ಯಕ್ಷ ಎ.ಎಸ್. ಕೃಷ್ಣೇಗೌಡ, ನಿರ್ದೇಶಕರಾದ ವಿ.ಎನ್. ರಾಜಣ್ಣ, ಬಿ.ಎಚ್. ಶಿವಣ್ಣ, ಎನ್. ಕೃಷ್ಣೇಗೌಡ, ಎಂ.ಆರ್. ಅನಿಲ್ ಕುಮಾರ್, ಕುಂಬಾರಹಳ್ಳಿ ರಮೇಶ್, ಸಿ.ಜಿ. ಜಗದೀಶ್ ಸೇರಿ ನಿರ್ದೇಶಕರು ಅಭಿನಂದಿಸಿದರು.

‘ಟಿಎಪಿಸಿಎಂಎಸ್ ₹1.50 ಕೋಟಿ ಬಂಡವಾಳ ಹೊಂದಿದೆ. ಪೆಟ್ರೋಲ್ ಬಂಕ್ ತೆರೆಯಲು ಉದ್ದೇಶಿಸಲಾಗಿತ್ತು, ತಾಂತ್ರಿಕಾರಣದಿಂದ ಮುಂದೂಡಲಾಗಿದೆ. ತಾಂತ್ರಿಕ ಕಾರಣವನ್ನು ನಿವಾರಿಸಿ ಬಂಕ್ ಆರಂಭಿಸಲಾಗುವುದು. ಪ್ರತಿ ತಿಂಗಳು ವಾಣಿಜ್ಯ ಮಳಿಗೆಗಳಿಂದ ₹1.40 ಲಕ್ಷ ಬಾಡಿಗೆ ಬರುತ್ತದೆ. ಟಿಎಪಿಸಿಎಂಎಸ್ ಅಭಿವೃದ್ದಿಪಥದತ್ತ ಸಾಗುತ್ತಿದೆ. ಉತ್ತಮ ಕಾರ್ಯನಿರ್ವಹಣೆಗಾಗಿ ಎರಡು ಸಲ ಪ್ರಶಸ್ತಿ ಪಡೆದಿದೆ’ ಎಂದು ರಾಜ್ಯಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಪುಟ್ಟಸ್ವಾಮಿಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.