ADVERTISEMENT

ಹಿರೀಸಾವೆ | ಕೊಬ್ಬರಿ ನೋಂದಾಣಿ ಮುಕ್ತಾಯ: ನಿರಾಸೆಯಿಂದ ಮರಳಿದ ರೈತರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 14:58 IST
Last Updated 8 ಮಾರ್ಚ್ 2024, 14:58 IST
ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಸುತ್ತ ಹೆಸರು ನೋಂದಾಣಿಗೆ ಅವಕಾಶ ಸಿಗಬಹುದು ಎಂದು ಶುಕ್ರವಾರ ಕಾಯುತ್ತಿದ್ದ ರೈತರು
ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಸುತ್ತ ಹೆಸರು ನೋಂದಾಣಿಗೆ ಅವಕಾಶ ಸಿಗಬಹುದು ಎಂದು ಶುಕ್ರವಾರ ಕಾಯುತ್ತಿದ್ದ ರೈತರು   

ಹಿರೀಸಾವೆ: ನಾಫೆಡ್‌ಗೆ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಲು ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ತಮ್ಮ ಸರದಿಗಾಗಿ ಕಾಯುತ್ತಿದ್ದ ಸುಮಾರು 500ಕ್ಕೂ ಹೆಚ್ಚು ರೈತರು ಹೆಸರು ನೋಂದಣಿ ಮಾಡಲಾಗದೆ ಶುಕ್ರವಾರ ಹಿಂದಿರುಗಿದರು.

ಗುರುವಾರ ಟೋಕನ್ ಪಡೆದ ರೈತರು ಶುಕ್ರವಾರ ಯಾವ ಸಮಯದಲ್ಲಾದರೂ ನೋಂದಣಿ ಮುಕ್ತಾಯವಾಗುತ್ತದೆ ಎಂದು ಸಂಜೆ, ರಾತ್ರಿಯೆಲ್ಲ ಸರತಿ ಸಾಲಿನಲ್ಲಿ ತಮ್ಮ ಸರದಿಗಾಗಿ ಕಾದರು. ಶುಕ್ರವಾರ ಬೆಳಗ್ಗೆ ನೋಂದಣಿ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಗೆ ಮುಕ್ತಾಯವಾಯಿತು. ತಮಗೂ ಸಿಗಬಹುದು ಎಂದು ಕೃಷಿ ಪತ್ತಿನ ಸಹಕಾರ ಸಂಘದ ಸುತ್ತ ರೈತ ಕುಟುಂಬದ ಹಿರಿಯರು, ಯುವಕರು, ಮಹಿಳೆಯರು ಗುಂಪು, ಗುಂಪಾಗಿ ನಿಂತ್ತಿದ್ದರು. ಕಳೆದ ನಾಲ್ಕು ದಿನದಿಂದ ರೈತರೊಂದಿಗೆ ಜಗಳ, ಮಾತಿನ ಚಕಮಕಿ, ನೂಕಾಟ ನಡೆಸಿದ್ದ ಅಧಿಕಾರಿಗಳು, ಪೊಲೀಸರು ಕೊಬ್ಬರಿ ನೋಂದಣಿ ಮುಕ್ತಾಯವಾಗುತ್ತಿದ್ದಂತೆ, ಮಗಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟರೆ, ದಿನ ಪೂರ್ತಿ ಕಾದರು ಹೆಸರು ನೋಂದಾಯಿಸಲು ಸಾಧ್ಯವಾಗಲಿಲ್ಲ ಎಂದು ಜನಪ್ರತಿನಿಧಿಗಳನ್ನು ಶಪಿಸುತ್ತಾ ರೈತರು ಬೇಸರದಿಂದ ನಡೆದರು.

ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಒಳಗೆ ಶುಕ್ರವಾರ ಹೆಸರು ನೋಂದಾಯಿಸಲು ನಿಂತಿದ್ದ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT