ADVERTISEMENT

5 ದಿನಕ್ಕೆ ಮುಕ್ತಾಯಗೊಂಡ ಕೊಬ್ಬರಿ ನೋಂದಣಿ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:23 IST
Last Updated 8 ಮಾರ್ಚ್ 2024, 15:23 IST
ನುಗ್ಗೇಹಳ್ಳಿ ರೈತ ಸಂಪರ್ಕ ಕೇಂದ್ರದ ಬಳಿ ಇರುವ ಕೊಬ್ಬರಿ ನೋಂದಣಿ ಕೇಂದ್ರದಲ್ಲಿ ಶುಕ್ರವಾರ ನೋಂದಣಿಗಾಗಿ ಕುಳಿತಿದ್ದ ರೈತರು
ನುಗ್ಗೇಹಳ್ಳಿ ರೈತ ಸಂಪರ್ಕ ಕೇಂದ್ರದ ಬಳಿ ಇರುವ ಕೊಬ್ಬರಿ ನೋಂದಣಿ ಕೇಂದ್ರದಲ್ಲಿ ಶುಕ್ರವಾರ ನೋಂದಣಿಗಾಗಿ ಕುಳಿತಿದ್ದ ರೈತರು   

ನುಗ್ಗೇಹಳ್ಳಿ: ಬೆಂಬಲ ಬೆಲೆ ಯೋಜನೆ ಅಡಿ ಕೊಬ್ಬರಿ ಖರೀದಿಗೆ ನೋಂದಣಿ ಐದೇ ದಿನಕ್ಕೆ ಮುಕ್ತಾಯ ಆಗಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದ ಬಳಿ ಬೆಳಿಗ್ಗೆಯಿಂದಲೇ ನೋಂದಣಿಗಾಗಿ ಟೋಕನ್ ಪಡೆದಿದ್ದ ರೈತರು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನದ ವೇಳೆಗೆ ಜಿಲ್ಲೆಗೆ ನಿಗದಿ ಮಾಡಿದಷ್ಟು ಪ್ರಮಾಣದ ಕೊಬ್ಬರಿ ನೋಂದಣಿ ಯಾಗಿದೆ ಎಂದು ನೊಂದಣಿ ಕೇಂದ್ರದ ಅಧಿಕಾರಿಗಳು ತಿಳಿಸುತ್ತಿದ್ದಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈ ಮೊದಲು ಆದೇಶದಲ್ಲಿ 45 ದಿನಗಳವರೆಗೆ ನೊಂದಣಿಗೆ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿತ್ತು.ಈಗ ಕೊಬ್ಬರಿ ಬೆಳೆಗಾರರಿಗೆ ಹೆಚ್ಚು ನಷ್ಟವಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋಬಳಿ ಕೇಂದ್ರದಲ್ಲಿ ಸುಮಾರು 2000ಕ್ಕೂ ಹೆಚ್ಚು ರೈತರಿಗೆ ನೋಂದಣಿಗಾಗಿ ಟೋಕನ್ ವಿತರಿಸಲಾಯಿತು, ಆದರೆ 700 ಒಳಗಿನ ಟೋಕನ್ ಪಡೆದ ರೈತರಿಗೆ ಮಾತ್ರ ಅವಕಾಶ ಸಿಕ್ಕಿದೆ. ಇದರಿಂದ ಸಾವಿರಕ್ಕೂ ಹೆಚ್ಚು ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.