ADVERTISEMENT

ಕೊಚ್ಚಿ ಹೋದ ಕೊಗೋಡು ಸೇತುವೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:19 IST
Last Updated 26 ಜುಲೈ 2024, 14:19 IST
ಬೇಲೂರು ತಾಲ್ಲೂಕಿನ ‌ಕೊಗೋಡು ಗ್ರಾಮದ ಸೇತುವೆ ಕೊಚ್ಚಿ ಹೋಗಿದೆ
ಬೇಲೂರು ತಾಲ್ಲೂಕಿನ ‌ಕೊಗೋಡು ಗ್ರಾಮದ ಸೇತುವೆ ಕೊಚ್ಚಿ ಹೋಗಿದೆ   

ಬೇಲೂರು: ತಾಲ್ಲೂಕಿನ ಕೊಗೋಡು ಗ್ರಾಮದ ಜಾಕನಹಳ್ಳಿ ಬಳಿ‌ ಮೂರು ತಿಂಗಳ ಹಿಂದೆ ನಿರ್ಮಿಸಿದ್ದ ಸೇತುವೆ ಮಳೆಯಿಂದ ಕೊಚ್ಚಿಹೋಗಿದೆ.

ಚೀಕನಹಳ್ಳಿ, ಶಿರಗುರ, ಅರೇಹಳ್ಳಿ ಸೇರಿದಂತೆ ಇತರೆ ಭಾಗಗಳಿಗೆ ತೆರಳಲು ಸಂಪರ್ಕ ಕಲ್ಪಿಸುವ ರಸ್ತೆ‌ ಇದ್ದಾಗಿದ್ದು, ಸೇತುವೆ ಕೊಚ್ಚಿ ಹೋಗಿರುವುದರಿಂದ 12 ಕುಟುಂಬಗಳು ಹೊರಬರಲು ಸಾಧ್ಯವಾಗದೆ ಪರಿತಪಿಸುತ್ತಿವೆ.

ಗ್ರಾಮಸ್ಥ ಮಂಜುನಾಥ್ ಹಾಗೂ ಸುನೀಲ್ ಮಾತನಾಡಿ, ‘ಕಾರ್ಮಿಕರು, ರೈತರಿಗೆ ಓಡಾಡಲು ಇದ್ದ ಸೇತುವೆಯೂ ಕೊಚ್ಚಿ ಹೋಗಿರುವುದರಿಂದ ತೀವ್ರ ತೊಂದರೆಯಾಗಿದೆ. ತಾಲ್ಲೂಕು ಆಡಳಿತ ಬದಲಿ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳಕ್ಕೆ ತಹಶೀಲ್ದಾರ್ ಎಂ.ಮಮತಾ ಭೇಟಿ ನೀಡಿ ಮಾತನಾಡಿ, ‘ಸಾರ್ವಜನಿಕರಿಗೆ ತೊಂದರೆಯಾಗದಂತೆ ಬದಲಿ ರಸ್ತೆಯನ್ನು ಮಾಡಿಸಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ರಾಜಸ್ವ ನಿರೀಕ್ಷಕ ಚಂದ್ರೇಗೌಡ, ಗ್ರಾಮ ಲೆಕ್ಕಾಧಿಕಾರಿ ಭಾನುಪ್ರಕಾಶ್, ಜಗದೀಶ್, ಪಿಡಿಒ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.