ಚನ್ನರಾಯಪಟ್ಟಣ: ‘ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’ ಎಂದು ಪುರಸಭಾಧ್ಯಕ್ಷೆ ಕೆ.ಎನ್.ಬನಶಂಕರಿ ಹೇಳಿದರು.
ಕರ್ನಾಟಕ ದಲಿತ ಸಮನ್ವಯ ಸಮಿತಿಯ ಮನುಜಮತ ಸಂಘಟನೆಯ ಉದ್ಘಾಟನೆ ಅಂಗವಾಗಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತು ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ 153 ವಿದ್ಯಾರ್ಥಿಗಳು ಭಾಗವಹಿಸಿ ಮಾತನಾಡಿದರು.
‘ಪಠ್ಯ ಪುಸ್ತಕದ ಜೊತೆ ದಿನಪತ್ರಿಕೆ ಓದಿ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ವಿಷಯಗಳನ್ನು ಅರ್ಥೈಸಿಕೊಳ್ಳಬೇಕು. ಪ್ರಸಕ್ತ ವಿದ್ಯಮಾನಗಳನ್ನು ತಿಳಿದುಕೊಂಡು ಪರೀಕ್ಷೆ ಎದುರಿಸಿದರೆ ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಗೋವಿಂದರಾಜು ದಿಂಡಗೂರು ಮಾತನಾಡಿ, ‘ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸುವ ದೃಷ್ಠಿಯಿಂದ ಪ್ರತಿವರ್ಷ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗುವುದು. ಸಧ್ಯದಲ್ಲಿ ಬಹುಮಾನ ವಿತರಿಸಲಾಗುವುದು’ ಎಂದು ಹೇಳಿದರು.
ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಜನಪದಗೀತೆ: ಶ್ರವಣಬೆಳಗೊಳದ ಬಾಹುಬಲಿ ಎಂಜಿನಿಯರಿಂಗ್ ಕಾಲೇಜು (ಪ್ರಥಮ), ಚನ್ನರಾಯಪಟ್ಟಣದ ಟೈಮ್ಸ್ ಪಿಯು ಕಾಲೇಜು (ದ್ವಿತೀಯ), ನುಗ್ಗೇಹಳ್ಳಿ ಸರ್ಕಾರಿ ಪಿಯು ಕಾಲೇಜು (ತೃತೀಯ).
ಸೋಬಾನೆ ಪದ: ಶ್ರವಣಬೆಳಗೊಳದ ಬಾಹುಬಲಿ ಎಂಜಿನಿಯರಿಂಗ್ ಕಾಲೇಜು (ಪ್ರಥಮ), ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ), ನುಗ್ಗೇಹಳ್ಳಿ ಸರ್ಕಾರಿ ಪಿಯು ಕಾಲೇಜು (ತೃತೀಯ). ಗೀಗೀ ಪದ: ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜು (ಪ್ರಥಮ). ತತ್ವಪದ: ಬಾಹುಬಲಿ ಎಂಜಿನಿಯರಿಂಗ್ ಕಾಲೇಜು (ಪ್ರಥಮ), ನುಗ್ಗೇಹಳ್ಳಿಯ ಸರ್ಕಾರಿ ಪಿಯು ಕಾಲೇಜು (ದ್ವಿತೀಯ).
ಏಕಪಾತ್ರಾಭಿನಯ: ಬಾಹುಬಲಿ ಎಂಜಿನಿಯರಿಂಗ್ ಕಾಲೇಜು (ಪ್ರಥಮ), ಚನ್ನರಾಯಪಟ್ಟಣದ ಜ್ಞಾನಸಾಗರ ಪಿಯುಕಾಲೇಜು (ದ್ವಿತೀಯ), ಟೈಮ್ಸ್ ಪಿಯುಕಾಲೇಜು (ತೃತೀಯ) ಸ್ಥಾನಗಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಲಕ್ಷ್ಮಯ್ಯ, ಎನ್.ಆರ್. ಅಶೋಕ್, ಜಬಿವುಲ್ಲಾ ಬೇಗ್, ಸಯೀದ್ ಅಹಮದ್, ತಾಲ್ಲೂಕು ಸಂಚಾಲಕರಾದ ಕೇಶವಮೂರ್ತಿ, ರೋಹಿತ್‍ಕುಮಾರ್, ದೇವರಾಜು, ಶಂಕರಲಿಂಗೇಗೌಡ, ಅನ್ಸರ್ ಪಾಷಾ, ಜಯರಾಂ, ತಾಲ್ಲೂಕು ಘಟಕದ ಖಜಾಂಚಿ ಸ್ವಾಮಿ, ತಾಲ್ಲೂಕುವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಮನೋಜ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಎಸ್.ಕೆ ಶಿವಣ್ಣ, ಮುಖಂಡ ಶಿವಲಿಂಗೇಗೌಡ, ಸಹಾಯಕ ಪ್ರಾಧ್ಯಾಪಕರಾದ ಎಚ್.ಜೆ. ಅರ್ಪಿತಾ, ಎನ್.ಟಿ. ನಾಗರಾಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.