ADVERTISEMENT

ಹೊಳೆನರಸೀಪುರ ಪುರಸಭೆ: ಕೆಟ್ಟಿರುವ ವಾಹನಗಳ ದುರಸ್ತಿ ಎಂದು?

ಪುರಸಭೆ ಅಧಿಕಾರಿಗಳ ಕಣ್ಣೆದುರೇ ಇದ್ದರೂ ದುರಸ್ತಿ ಆಸಕ್ತಿಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 7:11 IST
Last Updated 19 ಅಕ್ಟೋಬರ್ 2024, 7:11 IST
<div class="paragraphs"><p>ಹೊಳೆನರಸೀಪುರ ಪುರಸಭೆಯ ಮುಕ್ತಿವಾಹನ, ಕಸ ಎತ್ತುವ ವಾಹನಗಳು ನಿಯಮದಷ್ಟು ಓಡದಿದ್ದರೂ ದುರಸ್ತಿ, ಬಳಕೆ ಇಲ್ಲದೆ ತುಕ್ಕು ಹಿಡಿಯುತ್ತಿವೆ.</p></div>

ಹೊಳೆನರಸೀಪುರ ಪುರಸಭೆಯ ಮುಕ್ತಿವಾಹನ, ಕಸ ಎತ್ತುವ ವಾಹನಗಳು ನಿಯಮದಷ್ಟು ಓಡದಿದ್ದರೂ ದುರಸ್ತಿ, ಬಳಕೆ ಇಲ್ಲದೆ ತುಕ್ಕು ಹಿಡಿಯುತ್ತಿವೆ.

   

ಹೊಳೆನರಸೀಪುರ: ಇಲ್ಲಿನ ಪುರಸಭೆಯ ಆವರಣದಲ್ಲಿ ನಿಂತಿರುವ ಹೊಸ ಮುಕ್ತಿವಾಹನ 40 ಸಾವಿರ ಕಿ.ಮೀ. ಕೂಡ ಸಂಚರಿಸಿಲ್ಲ. ಈಗ ಮೂಲೆ ಸೇರಿದೆ.

ಮತ್ತೊಂದು ಟೆಂಪೋ ಟ್ರಾವಲರ್ ವಾಹನವನ್ನು ಶವಸಾಗಿ ಸಲು ಬಳಸಲಾಗುತ್ತಿತ್ತು. ಅದು ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟರು. ವಾಹನಕ್ಕೆ ವಿಮೆ ಇಲ್ಲದೆ, ಸತ್ತವರ ಅವಲಂಬಿತರಿಗೆ ಪರಿಹಾರವೂ ಸಿಗಲಿಲ್ಲ. ಲಕ್ಷಾಂತರ ಮೌಲ್ಯದ ಕಸ ಸಂಗ್ರಹಿಸುವ ‌ವಾಹನವೂ ಬಳಕೆಯಲ್ಲಿಲ್ಲ. ಇನ್ನೊಂದು ವಾಹನ 6 ತಿಂಗಳಿಂದ ಕೆಟ್ಟುನಿಂತಿದೆ. ಇನ್ನೂ ದುರಸ್ತಿ ಆಗಿಲ್ಲ.

ADVERTISEMENT

ಇಲ್ಲಿನ ಪುರಸಭೆ ಆವರಣದಲ್ಲಿ ಕೆಟ್ಟು ನಿಂತ ವಾಹನಗಳ ದುಸ್ಥಿತಿ ಇದು ಎಂದು ಸಿಬ್ಬಂದಿ ಆರೋಪಿಸುತ್ತಾರೆ. ದುರಸ್ತಿಯೇ ಆಗದಿದ್ದರೂ ಅವುಗಳನ್ನು ದಾಖಲೆಗಳಲ್ಲಿ ಬಳಸಲಾಗುತ್ತಿದೆ ಎಂಬ ಆರೋಪವೂ ಇದೆ.

ವಿದ್ಯುತ್ ಚಿತಾಗಾರವು ಪಟ್ಟಣ ದಿಂದ ದೂರದಲ್ಲಿದ್ದು, ನರಸಿಂಹ ನಾಯಕ ನಗರ, ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಗಳಿಂದ ಬರಲು ಕಷ್ಟ. ‌ಶವ ಸಾಗಿಸಲು ಮುಕ್ತಿವಾಹನ ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರು ಅನೇಕಬಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.  ಆದರೆ ಪುರಸಭೆ ಆವರಣದಲ್ಲಿ ಮುಕ್ತಿ ವಾಹನ ಕೆಟ್ಟು ನಿಂತಿದೆ.

ಪುರಸಭೆಯ ಹಿಂದಿನ ಅಧ್ಯಕ್ಷೆ, ಹಾಲಿ ಸದಸ್ಯೆ ಜಿ.ಕೆ. ಸುಧಾ ನಳಿನಿ, ಶವ ಸಂಸ್ಕಾರಕ್ಕೆ ನೆರವಾಗು ತ್ತಿದ್ದರು. ಅವರು ಅನೇಕ ಬಾರಿ ಪ್ರಯತ್ನಿಸಿದರೂ ಮುಕ್ತಿವಾಹನ ಬರಲಿಲ್ಲ.

‘ಕೆಟ್ಟು ನಿಂತ ವಾಹನಗಳಿಗೆ ಡೀಸೆಲ್ ಹಾಕಿಸಿದಂತೆ ದಾಖಲೆ ತೋರಿಸಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂಬುದು ಸಿಬ್ಬಂದಿಯ ಆರೋಪ. ವಾಹನಗಳು ಜನ ಬಳಕೆಗೂ ಸಿಗುತ್ತಿಲ್ಲ ಎಂಬುದು ಅವರ ಸಂಕಟ.

‌ನಿಗದಿತ ಕಿಮೀ ಸಂಚರಿಸಿ ವಾಹನಗಳು ಕೆಟ್ಟರೆ ಸಾರಿಗೆ ಅಧಿಕಾರಿ ಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ಗುಜರಿಗೆ ಹಾಕಬೇಕು. ದುರಸ್ತಿಗೆ ₹5ಸಾವಿರಕ್ಕಿಂತ ಹೆಚ್ಚು ವೆಚ್ಚವಾಗುವುದಾದರೆ ಜಿಲ್ಲಾಧಿಕಾರಿ ಯಿಂದ ಅನುಪತಿ ಪಡೆದು ದುರಸ್ತಿ ಮಾಡಿಸಿ ಮತ್ತೆ ಬಳಸಬೇಕು ಎಂಬುದು ನಿಯಮ. ಆದರೆ ಇಲ್ಲಿ ಈ ಎರಡೂ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪವಿದೆ.

ಪುರಸಭೆಯ ನೂತನ ಮುಖ್ಯಾಧಿಕಾರಿ ನಾಗೇಂದ್ರಕುಮಾರ್ ಅವರು ವಾಹನ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂಬ ಆಗ್ರಹ ಮೂಡಿದೆ.

ನಾನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿದ್ದೆ. ಪುರಸಭೆಯ ವಾಹನಗಳ ಬಗ್ಗೆ ಗಮನಿಸುತ್ತೇವೆ.
ಕೆ. ಶ್ರೀಧರ್, ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.