ADVERTISEMENT

ಹಾಸನಾಂಬೆ ದರ್ಶನದ ವೇಳೆ ಜನರಿಗೆ ವಿದ್ಯುತ್‌ ಶಾಕ್‌: ನೂಕುನುಗ್ಗಲು, ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 8:56 IST
Last Updated 10 ನವೆಂಬರ್ 2023, 8:56 IST
<div class="paragraphs"><p> ಹಾಸನಾಂಬ ದರ್ಶನಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದ ಜನ (ಸಂಗ್ರಹ ಚಿತ್ರ)</p></div>

ಹಾಸನಾಂಬ ದರ್ಶನಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದ ಜನ (ಸಂಗ್ರಹ ಚಿತ್ರ)

   

ಹಾಸನ: ಶುಕ್ರವಾರ ಮಧ್ಯಾಹ್ನ ಹಾಸನಾಂಬೆ ದರ್ಶನದ ಸಂದರ್ಭದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ 20 ಜನರಿಗೆ ವಿದ್ಯುತ್‌ ಶಾಕ್‌ ತಗುಲಿದ್ದು, ಈ ವೇಳೆ ಉಂಟಾದ ಗೊಂದಲದಿಂದ ಜನರ ನೂಕುನುಗ್ಗಲು ಉಂಟಾಗಿದೆ.

ಬೆಳಿಗ್ಗೆ ಬ್ಯಾರಿಕೇಡ್‌ನಲ್ಲಿ ಸರದಿಯಲ್ಲಿ ನಿಂತಿದ್ದ ಕೆಲ ಜನರಿಗೆ ವಿದ್ಯುತ್‌ ಶಾಕ್‌ ತಗುಲಿದೆ. ಕೂಡಲೇ ಆಘಾತಕ್ಕೆ ಒಳಗಾದವರನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ADVERTISEMENT

ದೇವಾಲಯದಲ್ಲಿ ವಿದ್ಯುತ್ ಆಘಾತ ತಗುಲಿದ ಸುದ್ದಿ ಹರಡುತ್ತಿದ್ದಂತೆಯೇ ಭಯಗೊಂಡ ಜನರು, ಬ್ಯಾರಿಕೇಡ್‌ನಿಂದ ಹೊರಬರಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ದಿಢೀರ್‌ ನೂಕುನುಗ್ಗಲು ಉಂಟಾಗಿದ್ದು, ಒಬ್ಬರ ಮೇಲೊಬ್ಬರು ಬಿದ್ದರು. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಯಂಸೇವಕರು ಜನರಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಿದರೂ, ಜನರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. .

ಕೆಲವು ನಿಮಿಷಗಳಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಿದ್ದು, ಮತ್ತೆ ಜನರು ಬ್ಯಾರಿಕೇಡ್‌ ಮೂಲಕ ದರ್ಶನದ ಸರದಿಯಲ್ಲಿ ನಿಂತಿದ್ದಾರೆ. ಹಾಸನಾಂಬೆ ದೇಗುಲದ ದರ್ಶನ ಪಡೆಯಲು ದಿನದಿಂದ ದಿನಕ್ಕೆ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಕ್ರವಾರವೂ ಜನರ ಸಂಖ್ಯೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.