ADVERTISEMENT

ಸಕಲೇಶಪುರ: ಕಾಡಾನೆಗಳಿಂದ ಕಾಫಿ ತೋಟ ನಾಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:36 IST
Last Updated 5 ಜುಲೈ 2024, 14:36 IST
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದ ರೈತ ಸದಾಶಿವ ಆಚಾರ್ ಅವರ ಕಾಫಿ ತೋಟದಲ್ಲಿ ಕಾಡಾನೆಗಳು ವಾಸ್ತವ್ಯ ಹೂಡಿ ತೋಟವನ್ನು ಮೈದಾನ ಮಾಡಿರುವುದು
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದ ರೈತ ಸದಾಶಿವ ಆಚಾರ್ ಅವರ ಕಾಫಿ ತೋಟದಲ್ಲಿ ಕಾಡಾನೆಗಳು ವಾಸ್ತವ್ಯ ಹೂಡಿ ತೋಟವನ್ನು ಮೈದಾನ ಮಾಡಿರುವುದು   

ಸಕಲೇಶಪುರ:  35ಕ್ಕೂ ಹೆಚ್ಚು ಕಾಡಾನೆಗಳು ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿ ಮಾಡಿವೆ.

ಗ್ರಾಮದ ಸದಾಶಿವ ಆಚಾರ್, ಎಚ್‌.ಎಸ್‌. ಶ್ರೀಕಾಂತ್ ಹಾಗೂ ಇತರ ಬೆಳೆಗಾರ ಕಾಫಿ ತೋಟದಲ್ಲಿಯೇ ವಾಸ್ತವ್ಯ ಹೂಡಿ ನೂರಾರು ಕಾಫಿ ಗಿಡಗಳನ್ನು ಸಂಪೂರ್ಣ ನಾಶ ಮಾಡಿವೆ.   ‘ಕಾಫಿ, ಅಡಿಕೆ ಹಾಗೂ ಇತರ ಬೆಳೆಗಳನ್ನು ಆನೆಗಳು ನೆಲಸಮ ಮಾಡಿವೆ. ಬದುಕಿಗೆ ಆದಾರವಾಗಿರುವ ಬೆಳೆಗಳನ್ನು ಆನೆಗಳು ಪದೇ ಪದೇ ನಾಶ ಮಾಡುತ್ತಲೇ ಇರುವುದರಿಂದ ಬದುಕುವುದೇ ಕಷ್ಟವಾಗಿದೆ’ ಎಂದು ಕೃಷಿಕ ಎಚ್‌.ಎಸ್‌. ಶ್ರೀಕಾಂತರ ಸಮಸ್ಯೆ ಹೇಳಿಕೊಂಡರು.
ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲಿಸಿದರು.

ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದ ರೈತ ಸದಾಶಿವ ಆಚಾರ್ ಅವರ ಕಾಫಿ ತೋಟದಲ್ಲಿ ಕಾಡಾನೆಗಳು ವಾಸ್ತವ್ಯ ಹೂಡಿ ತೋಟವನ್ನು ಮೈದಾನ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.