ಹಾಸನ: ‘ನೂತನ ಶಾಸಕ ಸ್ವರೂಪ್ ಅವರಿಗೆ ಇನ್ನೂ 5 ವರ್ಷ ಅವಕಾಶವಿದೆ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಗೆ ಗಮನ ಹರಿಸಲಿ. ಅಕ್ಕಪಕ್ಕದ ಕ್ಷೇತ್ರಗಳ ಮುಖಂಡರ ಮಾತು ಕೇಳುವುದು ಬೇಡ’ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರೀತಂ ಗೌಡ ಸಲಹೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಯಾರೂ ಸಹ ನಕಲಿ ಬಿಲ್‌ಗಳನ್ನು ಮಾಡುವುದಿಲ್ಲ. ಹಾಗೇನಾದರೂ ಮಾಡಿದ್ದರೆ, ಸೂಕ್ತ ಕ್ರಮ ಕೈಗೊಳ್ಳಲಿ’ ಎನ್ನುವ ಮೂಲಕ ಸ್ವರೂಪ್ ಅವರಿಗೆ ತಿರುಗೇಟು ನೀಡಿದರು.
‘ಒಂದು ವರ್ಗದ ಮತಗಳು ನನಗೆ ಬಂದಿಲ್ಲ ಎಂದು ಹೇಳಿದ್ದೇನೆ. ಅದರ ಅರ್ಥ ಕಾಂಗ್ರೆಸ್‌ನ ಮತಗಳು ಜೆಡಿಎಸ್‌ಗೆ ಹೋಗಿವೆ ಎಂದೇ ಹೊರತು, ಯಾವುದೇ ಸಮುದಾಯದ ಬಗ್ಗೆ ಪ್ರಸ್ತಾಪಿಸಿಲ್ಲ. ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.