ಅರಕಲಗೂಡು: ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಜಾನಪದ ಪ್ರಶಸ್ತಿಗೆ ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಜೋಡಿವಡ್ಡರಹಳ್ಳಿ ಗ್ರಾಮದ ತತ್ವಪದ ಗಾಯಕ ವೀರಭದ್ರಯ್ಯ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ತತ್ವಪದ ಗಾಯನದ ಜತೆಗೆ ಏಕತಾರಿ ತಂಬೂರಿಗಳನ್ನು ತಯಾರಿಸುವುದು, ತತ್ವಪದ, ಪೌರಾಣಿಕ ನಾಟಕ, ಹಾರ್ಮೋನಿಯಂ, ನಾದಸ್ವರ, ತಮಟೆ ವಾದ್ಯ, ಡ್ರಮ್ಸ್ ವಾದ್ಯಗೋಷ್ಠಿ ಕಲಿಸುವ ಕಾರ್ಯವನ್ನೂ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.